Select Your Language

Notifications

webdunia
webdunia
webdunia
webdunia

ರವಿವರ್ಮನ ಕಲ್ಪನೇ ಸಾಕಾರವಾಗಿದೆ: ಹರ್ಷಿಕಾ ಬೇಬಿ ಬಂಪ್‌ ಫೋಟೋ ಶೂಟ್‌ಗೆ ಭಾರೀ ಮೆಚ್ಚುಗೆ

Harshika Poonaccha

Sampriya

ಬೆಂಗಳೂರು , ಮಂಗಳವಾರ, 20 ಆಗಸ್ಟ್ 2024 (16:48 IST)
photo Courtesy Instagram
ಬೆಂಗಳೂರು: ತಾಯಿಯಾಗುತ್ತಿರುವ ಸುದ್ದಿಯನ್ನು ಡಿಫರೆಂಟ್‌ ಆಗಿ ಹೇಳಿದ್ದ ನಟಿ ಹರ್ಷಿಕಾ ಪೂಣಚ್ಚ ಅವರು ಇದೀಗ ಬೇಬಿ ಬಂಪ್ ಫೋಟೋ ಶೂಟ್‌ ಅನ್ನು ಕೂಡಾ ಅಷ್ಟೇ ವಿಶೇಷ ಥೀಮ್‌ನಲ್ಲಿ ಮಾಡಿಸಿಕೊಂಡಿದ್ದಾರೆ.

ರವಿವರ್ಮ ಪೇಟಿಂಗ್ ಥೀಮ್‌ನಲ್ಲಿ ಸುಂದರವಾಗಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಎಲ್ಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ನಮ್ಮ ಸಂಸ್ಕೃತಿ, ನಮ್ಮ ಸೊಗಡನ್ನು ತುಂಬಾ ಅಚ್ಚುಕಟ್ಟಾಗಿ ನಡೆಸುಕೊಂಡು ಬರುತ್ತಿದ್ದೀರಿ, ಮುಂದುವರೆಯಲಿ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.

ಮತ್ತೊಬ್ಬರು ಫೋಟೋ ನೋಡಿ ನೋಡಲು ಬೇಬಿ ಬಾಯ್‌ ಅನ್ಸುತ್ತೆ, ಆದರೆ ಸೀರೆ ಕಲರ್ ನೋಡಿದ್ರೆ ಬೇಬಿ ಗರ್ಲ್‌ ಅನ್ಸುತ್ತೆ ಎಂದು ಕೆಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೋಡಲು ರವಿವರ್ಮ ಫೇಟಿಂಗ್ ಥರನೇ ಕಾಣಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೋಟೋದಲ್ಲಿ ಹರ್ಷಿಕಾ ಅವರು ಆಭರಣ ಹಾಕಿ ಪಿಂಕ್ ಬಣ್ಣದ ಸೀರೆಯುಟ್ಟು ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಗಳಲ್ಲಿ ನಟಿ ಪೋಸ್ ನೀಡಿದ್ದಾರೆ. ವಿಭಿನ್ನ ರೀತಿಯಲ್ಲಿ ನಟಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಲುಕ್‌ ನೋಡಿ ಫ್ಯಾನ್ಸ್‌ ವಾವ್‌ ಎನ್ನುತ್ತಿದ್ದಾರೆ.

ಜು.2ರಂದು ಕೊಡಗು ಶೈಲಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಹರ್ಷಿಕಾ ಭುವನ್ ದಂಪತಿ ಹಂಚಿಕೊಂಡರು.  ವಿಶೇಷವಾಗಿ ಫೋಟೋ ಶೂಟ್ ಮಾಡಿಸಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ವೀರೇಂದ್ರ ಹೆಗ್ಡೆಗೆ ರಾಖಿ ಕಟ್ಟಿದ ನಟಿ ಶ್ರುತಿಗೆ ನೀವೆಲ್ಲಾ ಯಾವಾಗ ಬುದ್ಧಿ ಕಲಿತೀರೋ ಎಂದ ನೆಟ್ಟಿಗರು