ರತ್ನನ್ ಪ್ರಪಂಚ: ಅಮ್ಮನ ನೆನಪಲ್ಲಿ ರತ್ನಾಕರನ ಪಯಣ

Webdunia
ಶನಿವಾರ, 23 ಅಕ್ಟೋಬರ್ 2021 (10:03 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ನಿನ್ನೆ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳಿಂದ ಹಿಡಿದು ಸೆಲೆಬ್ರಿಟಿಯವರೆಗೆ ಈ ಸಿನಿಮಾ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ.


ಸಾಮಾನ್ಯ ಎಲ್ ಐಸಿ ನೌಕರ ರತ್ನಾಕರನಿಗೆ ಅಕಸ್ಮಾತ್ತಾಗಿ ತನ್ನ ನಿಜವಾದ ಅಮ್ಮನ ಬಗ್ಗೆ ಗೊತ್ತಾಗುತ್ತದೆ. ಅಲ್ಲಿಂದ ಆತ ಹೆತ್ತಮ್ಮ, ಒಡಹುಟ್ಟಿದವರನ್ನು ಹುಡುಕಿಕೊಂಡು ಬೆಂಗಳೂರಿನಿಂದ ಕಾಶ್ಮೀರದವರೆಗೆ ಅಲ್ಲಿಂದ ಗೋಕರ್ಣದವರೆಗೆ ಪಯಣಿಸುವ ಭಾವುಕ ಪಯಣದ ಕತೆಯೇ ರತ್ನನ್ ಪ್ರಪಂಚ.

ಆತನ ಬದುಕಿಗೆ ತಿರುವ ಕೊಡುವ ಹುಡುಗಿ ಮಯೂರಿ ಆತನ ಪಯಣಕ್ಕೆ ಜೊತೆಯಾಗುತ್ತಾಳೆ. ನಂತರ ಆತ ತನ್ನ ಹೆತ್ತಮ್ಮನನ್ನು ಕಂಡುಕೊಳ್ಳುತ್ತಾನಾ ಇದರ ನಡುವೆ ಆತನ ಜೀವನದಲ್ಲಿ ಏನೆಲ್ಲಾ ಅಚ್ಚರಿಗಳು ಎದುರಾಗುತ್ತವೆ ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.

ಅಮ್ಮನಾಗಿ ನಟಿ ಉಮಾಶ್ರೀ ಮತ್ತೆ ನಮ್ಮ ಕಣ್ಣಂಚಲ್ಲಿ ನೀರು ತರಿಸುತ್ತಾರೆ. ಚಿತ್ರದ ಮೊದಲಾರ್ಧದಲ್ಲಿ ಅವರು ಬರುವುದಾದರೂ ಇಡೀ ಸಿನಿಮಾ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಇವರ ಜೊತೆಗೆ ಮತ್ತೊಬ್ಬ ಹಿರಿಯ ನಟಿ ಶ್ರುತಿ ನೈಜ ಅಭಿನಯ, ಉಡಾಳನಾಗಿ ಯುವ ನಟ ಪ್ರಮೋದ್, ಸ್ನೇಹ ಜೀವಿಯಾಗಿ ರವಿಶಂಕರ್ ಗೌಡ, ಕೆಲವೇ ಹೊತ್ತಾದರೂ ನಮ್ಮನ್ನು ಹಿಡಿದಿಡುವ ಅನುಪ್ರಭಾಕರ್ ಮನೋಜ್ಞ ಅಭಿನಯದಿಂದ ನಮ್ಮನ್ನು ಕಾಡುತ್ತಾರೆ. ಒಟ್ಟಾರೆ ಇದೊಂದು ಭಾವುಕ ಸಿನಿಮಾವಾಗಿದ್ದು, ಕೆಲವೊಂದು ಕಡೆ ಸ್ಕ್ರೀನ್ ಪ್ಲೇ ಕೊಂಚ ನಿಧಾನವಾಯಿತು ಎಂದಾದರೂ ಕನ್ನಡದ ಮಟ್ಟಿಗೆ ಇದೊಂದು ವಿಶಿಷ್ಟ ಸಿನಿಮಾ ಎಂದೇ ಹೇಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿತ್ಯಾ ಪಾತ್ರ ನೋಡಿ ಕೆಟ್ಟ ಕಾಮೆಂಟ್ ಗೆ ಬೇಸರಗೊಂಡ ನಮ್ರತಾ ಗೌಡ ಹೇಳಿದ್ದೇನು

777 ಚಾರ್ಲಿ ಸಿನಿಮಾಕ್ಕೆ ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿ: ಪ್ರಶಸ್ತಿ ಗೆದ್ದ ರಕ್ಷಿತ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

ಹೊಂಬಾಳೆ ಫಿಲಂಸ್ ಮನವಿಗೂ ಬೆಲೆಯಿಲ್ಲ, ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯಗಳೇ ಲೀಕ್

ಜೈಲಿನಲ್ಲಿ ದರ್ಶನ್ ಸ್ಥಿತಿಕಂಡು ಪತ್ನಿ ವಿಜಯಲಕ್ಷ್ಮಿಕಣ್ಣೀರು ಹಾಕಿದ್ದು ಯಾಕೆ ಗೊತ್ತಾ

ಪ್ರತಿಯೊಬ್ಬ ಫಿಲ್ಮ್ ಮೇಕರ್ಸ್‌ ನಾಚಿಕೆಪಡಬೇಕು: ಕಾಂತಾರ ನೋಡಿ ರಾಮ್‌ ಗೋಪಾಲ್ ವರ್ಮಾ ಹೀಗಂದಿದ್ಯಾಕೆ

ಮುಂದಿನ ಸುದ್ದಿ
Show comments