Publish Date: Fri, 08 Apr 2022 (17:11 IST)
Updated Date: Fri, 08 Apr 2022 (17:12 IST)
ಬೆಂಗಳೂರು: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಬರ್ತ್ ಡೇಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ ರಶ್ಮಿಕಾ ಮಂದಣ್ಣಗೆ ಪುನೀತ್ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.
ರಶ್ಮಿಕಾ ಈ ಹಿಂದೆ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಒಂದೇ ಒಂದು ವಿಶ್ ಮಾಡಿರಲಿಲ್ಲ. ಪುನೀತ್ ಜೊತೆ ನಟಿಸಿದ್ದರೂ ಅವರ ಕೊನೆಯ ಸಿನಿಮಾಗೆ ವಿಶ್ ಮಾಡುವ ಮತ್ತು ಹುಟ್ಟುಹಬ್ಬದಂದು ಸ್ಮರಣೆ ಮಾಡುವ ಔದಾರ್ಯವನ್ನೂ ತೋರಲಿಲ್ಲ.
ಆದರೆ ಈಗ ಅಲ್ಲು ಅರ್ಜುನ್ ಬರ್ತ್ ಡೇ ಮರೆಯದೇ ವಿಶ್ ಮಾಡಿದ್ದಾರೆ. ಹೀಗಾಗಿ ಸ್ಯಾಂಡಲ್ ವುಡ್ ಸ್ಟಾರ್ ಗಳು ಎಂದರೆ ರಶ್ಮಿಕಾಗೆ ಅಸಡ್ಡೆನಾ ಎಂದು ಪುನೀತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.