ನೀನಾ ನಾನಾ? ನೋಡೇಬಿಡೋಣ! ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಧುಮ್ಕಿ!

ಶನಿವಾರ, 8 ಜೂನ್ 2019 (09:45 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಬ್ರೇಕ್ ನ ನಂತರ ಸೋಷಿಯಲ್ ಮೀಡಿಯಾಗೆ ವಾಪಸ್ ಆಗಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದೇ ತಡ. ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ-ರಕ್ಷಿತ್ ಅಭಿಮಾನಿಗಳ ನಡುವೆ ನೀನಾ ನಾನಾ ಶುರುವಾಗಿದೆ.


ರಕ್ಷಿತ್ ಅವನೇ ಶ್ರೀಮನ್ನಾರಾಯಣ ಟೀಸರ್ ಬಿಡುಗಡೆ ಮಾಡಿದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ತಮ್ಮ ಡಿಯರ್ ಕಾಮ್ರೇಡ್ ಸಿನಿಮಾ ಬಿಡುಗಡೆಗೆ ಇನ್ನು 50 ದಿನ. ಕಾಯ್ತಾ ಇರಿ ಎಂದು ಟ್ವೀಟ್ ಮಾಡಿದ್ದರು. ಇದನ್ನು ನೋಡಿದ ರಕ್ಷಿತ್ ಅಭಿಮಾನಿಗಳು ಈಗ ರಶ್ಮಿಕಾರನ್ನು ಟ್ರೋಲ್ ಮಾಡುತ್ತಿದ್ದಾರೆ.

ನಾವು ಕಾಯ್ತಿರೋದು ಅವನೇ ಶ್ರೀಮನ್ನಾರಾಯಣ ಸಿನಿಮಾಗಾಗಿ ಎಂದು ಕೆಲವರು ಟಾಂಗ್ ಕೊಟ್ಟರೆ ಇನ್ನು ಕೆಲವರು ಅವನೇ ಶ್ರೀಮನ್ನಾರಾಯಣ ಮತ್ತು ಡಿಯರ್ ಕಾಮ್ರೇಡ್ ಎರಡೂ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಯಾರು ಗೆಲ್ಲೋದು ನೋಡೋಣ ಎಂದು ಸವಾಲು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಒಂದೇ ಫೈಟಿಂಗ್ ಸೀನ್ ಗೆ ನಿರ್ದೇಶಕ ರಾಜಮೌಳಿ ಮಾಡಲಿರುವ ವೆಚ್ಚವೆಷ್ಟು ಗೊತ್ತೇ?!