Publish Date: Sat, 23 Oct 2021 (17:01 IST)
Updated Date: Sat, 23 Oct 2021 (17:04 IST)
ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ವರ್ಕೌಟ್ ವಿಡಿಯೋ ಹಾಕುತ್ತಿರುತ್ತಾರೆ. ಇದೀಗ ಅವರು ಅಂತಹದ್ದೇ ವಿಡಿಯೋವೊಂದನ್ನು ಪ್ರಕಟಿಸಿದ್ದು, ಕುತೂಹಲಕಾರಿಯಾಗಿದೆ.
ರಶ್ಮಿಕಾ ತಮ್ಮ ಟ್ರೈನರ್ ಜೊತೆಗೆ ಬೆಡ್ ಗೆ ಕಾಲೆತ್ತಿ ಒದೆಯುವ ವಿಡಿಯೋವೊಂದನ್ನು ಪ್ರಕಟಿಸಿದ್ದು, ಇದರ ಜೊತೆಗೆ ಸಿಟ್ಟು ಬಂದಾಗ ನಾನು ಹೀಗೇ ಮಾಡೋದು ಎಂದು ಬರೆದುಕೊಂಡಿದ್ದಾರೆ.
ಇನ್ನು, ರಶ್ಮಿಕಾ ಈ ವಿಡಿಯೋದಲ್ಲಿ ಕಾಲೆತ್ತಿ ಒದೆಯುವುದು ನೋಡಿದರೆ ಮುಂದೊಂದು ದಿನ ನಿರ್ಮಾಪಕರು ಆಕೆಯ ಕೈಯಲ್ಲಿ ಫೈಟಿಂಗ್ ಮಾಡಿಸಿದರೂ ಅಚ್ಚರಿಯಿಲ್ಲ!