Select Your Language

Notifications

webdunia
webdunia
webdunia
webdunia

ರತ್ನನ್ ಪ್ರಪಂಚ ಹೀರೋಯಿನ್ ಪಾತ್ರಕ್ಕೆ ರಮ್ಯಾ ಆಯ್ಕೆಯಾಗಬೇಕಿತ್ತು! ಅಚ್ಚರಿ ವಿಚಾರ ಬಹಿರಂಗಪಡಿಸಿದ ನಟಿ!

ರತ್ನನ್ ಪ್ರಪಂಚ ಹೀರೋಯಿನ್ ಪಾತ್ರಕ್ಕೆ ರಮ್ಯಾ ಆಯ್ಕೆಯಾಗಬೇಕಿತ್ತು! ಅಚ್ಚರಿ ವಿಚಾರ ಬಹಿರಂಗಪಡಿಸಿದ ನಟಿ!
ಬೆಂಗಳೂರು , ಶನಿವಾರ, 23 ಅಕ್ಟೋಬರ್ 2021 (10:17 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾ ನಿನ್ನೆಯಷ್ಟೇ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಿದೆ. ಇದೀಗ ಸಿನಿಮಾ ಬಗ್ಗೆ ನಟಿ ರಮ್ಯಾ ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.


ಕೆಲವು ದಿನಗಳ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಟ್ರೈಲರ್ ಬಿಡುಗಡೆಯಾದಾಗ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿ ಸಂದೇಶ ಬರೆದಿದ್ದರು. ಇದೀಗ ರತ್ನನ್ ಪ್ರಪಂಚ ಸಿನಿಮಾ ನೋಡಲು ಹೊರಟಿರುವುದಾಗಿ ರಮ್ಯಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಜೊತೆಗೆ ಮತ್ತೊಂದು ಅಚ್ಚರಿ ವಿಚಾರ ಬಹಿರಂಗಪಡಿಸಿದ್ದಾರೆ.

ಈ ಸಿನಿಮಾದ ಹೀರೋಯಿನ್ ಪಾತ್ರಕ್ಕೆ ನನ್ನನ್ನು ಮೊದಲು ಕೇಳಿದ್ದರು. ಹೀಗಾಗಿ ಈಗ ನಾನೇನು ಮಿಸ್ ಮಾಡಿದೆ ಎಂದು ನೋಡಲು ಈ ಸಿನಿಮಾ ನೋಡಬೇಕಿದೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಸ್ವತಃ ರಮ್ಯಾ ತಮಗೆ ಬಂದ ಆಫರ್ ಬಗ್ಗೆ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರತ್ನನ್ ಪ್ರಪಂಚ: ಅಮ್ಮನ ನೆನಪಲ್ಲಿ ರತ್ನಾಕರನ ಪಯಣ