ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತೆ ತಮ್ಮ ಹಳೆಯ ಬಾಯ್ ಫ್ರೆಂಡ್ ವಿಜಯ್ ದೇವರಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಟಿ ತಾವು ಹಾಗೂ ವಿಜಯ್ ಡೇಟಿಂಗ್ ಮಾಡುತ್ತಿರುವುದಾಗಿ ಹಬ್ಬಿದ್ದ ಸುದ್ದಿಗಳು ಕ್ಯೂಟ್ ಎಂದಿದ್ದರು. ಆದರೆ ನಾವಿಬ್ಬರೂ ಒಳ್ಳೆಯ ಗೆಳೆಯರು ಎಂದಿದ್ದರು.
ಈಗ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಲಿಪ್ ಕಿಸ್ ಮಾಡಿದ್ದಕ್ಕೆ ಟ್ರೋಲ್ ಆದ ಕ್ಷಣಗಳನ್ನು ನೆನೆದಿದ್ದಾರೆ. ಆವತ್ತು ನನಗೆ ಆ ಕಾಮೆಂಟ್ ಗಳು ತೀವ್ರ ನೋವು ತಂದಿತ್ತು. ಎಷ್ಟೆಂದರೆ ಅತ್ತು ಬಿಡುವಷ್ಟು ನೋವಾಗುತ್ತಿತ್ತು. ಎಲ್ಲರೂ ನನಗೆ ಬೆನ್ನು ಹಾಕಿ ನಡೆದಂತೆ ಬಾಸವಾಗುತ್ತಿತ್ತು ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
-Edited by Rajesh Patil