ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣಗೆ ತಮ್ಮ ಮ್ಯಾನೇಜರ್ ನಿಂದಲೇ 80 ಲಕ್ಷ ರೂ. ವಂಚನೆಯಾಗಿದೆ ಎಂಬ ಸುದ್ದಿಗಳ ಬಗ್ಗೆ ಇದೀಗ ಸ್ವತಃ ನಟಿಯ ಕಡೆಯಿಂದ ಸ್ಪಷ್ಟನೆ ದೊರೆತಿದೆ.
ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರಶ್ಮಿಕಾ ಪಿಆರ್ ತಂಡ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದಿದೆ. ಆದರೆ ಮ್ಯಾನೇಜರ್ ಮತ್ತು ರಶ್ಮಿಕಾ ಬೇರೆಯಾಗಿದ್ದು ನಿಜ ಎಂದಿದೆ.
ಇಬ್ಬರೂ ದೂರವಾಗಲು ತೀರ್ಮಾನಿಸಿದ್ದಾರೆ. ತಮ್ಮ ಭವಿಷ್ಯದ ದೃಷ್ಟಿಯಿಂದ ತಮ್ಮ ದಾರಿ ನೋಡಿಕೊಳ್ಳಲು ತೀರ್ಮಾನಿಸಿದ್ದಾರೆ. ಅದರ ಹೊರತಾಗಿ ಇಬ್ಬರ ನಡುವೆ ಯಾವುದೇ ಧ್ವೇಷ, ವಂಚನೆಯಾಗಲೀ ನಡೆದಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಲು ಹೇಳಿಕೆ ಬಿಡುಗಡೆ ಮಾಡುತ್ತಿರುವುದಾಗಿ ರಶ್ಮಿಕಾರ ತಂಡ ಸ್ಪಷ್ಟನೆ ನೀಡಿದೆ.