Select Your Language

Notifications

webdunia
webdunia
webdunia
webdunia

ಕನ್ನಡ ಹಿರಿಯ ನಟಿಗೆ ಮಗ, ಸೊಸೆಯಿಂದ ಕಿರುಕುಳ ಆರೋಪ

ಕನ್ನಡ ಹಿರಿಯ ನಟಿಗೆ ಮಗ, ಸೊಸೆಯಿಂದ ಕಿರುಕುಳ ಆರೋಪ
ಬೆಂಗಳೂರು , ಗುರುವಾರ, 22 ಜೂನ್ 2023 (09:20 IST)
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ಪೋಷಕ ನಟಿಗೆ ಸ್ವಂತ ಮಗ-ಸೊಸೆಯಿಂದಲೇ ಕಿರುಕುಳ ಆರೋಪ ಕೇಳಿಬಂದಿದೆ.

ಹಿರಿಯ ನಟಿ ಶ್ಯಾಮಲಾದೇವಿ ತಮ್ಮ ಮಗ ನಿತಿನ್ ಮತ್ತು ಸೊಸೆ ವಿರುದ್ಧ ಕಿರುಕುಳ ಆರೋಪ ಹೊರಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಗ-ಸೊಸೆ ವಿರುದ್ಧ ದೂರು ನೀಡಿದ್ದಾರೆ.

ಮಗ-ಸೊಸೆ ಪ್ರತಿನಿತ್ಯ ಬೈಗುಳ, ಹಿಂಸೆ ನೀಡುತ್ತಿದ್ದರು. ಈಗ ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ಯಾಮಲಾದೇವಿ  ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರ ಪತ್ನಿ. ಗಂಧದ ಗುಡಿ, ಬಂಗಾರದ ಮನುಷ್ಯ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಶ್ಯಾಮಲಾದೇವಿ ನಟಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪೂಜಾ ಹೆಗ್ಡೆ ಸ್ಥಾನಕ್ಕೆ ಬಂದ ತ್ರಿಷಾ ಕೃಷ್ಣನ್