Publish Date: Fri, 23 Jun 2023 (08:10 IST)
Updated Date: Fri, 23 Jun 2023 (08:44 IST)
ಬೆಂಗಳೂರು: ನಟಿ ದೀಪಿಕಾ ಪಡುಕೋಣೆ ಇಂದು ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಭಾರೀ ಹೆಸರು ಗಳಿಸಿರಬಹುದು.
ಆದರೆ ಅವರ ಮೂಲ ಕರ್ನಾಟಕ. ತಂದೆ, ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಮೂಲತಃ ಕರ್ನಾಟಕದವರು. ದೀಪಿಕಾ ಕೂಡಾ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರ ಮೊದಲ ಸಿನಿಮಾವೂ ಕನ್ನಡದಲ್ಲಿ.
ಆದರೆ ಇಂದು ಬಾಲಿವಡ್ಡಿಗಳೇ ಆಗಿರುವ ದೀಪಿಕಾ ತವರು ಮರೆತಿದ್ದಾರಾ? ಖಂಡಿತಾ ಇಲ್ಲ. ಆಗಾಗ ತಂದೆಯನ್ನು ನೋಡಲು ಅವರು ಬೆಂಗಳೂರಿನ ಮನೆಗೆ ಬರುತ್ತಿರುತ್ತಾರೆ. ಹಾಗೆ ಕುಟುಂಬದವರೆಲ್ಲಾ ಸೇರಿದಾಗ ಅವರು ತಮ್ಮ ಮನೆ ಭಾಷೆ ಕೊಂಕಣಿಯಲ್ಲಿ ಮಾತನಾಡುತ್ತಾರಂತೆ. ಈ ವಿಚಾರವನ್ನು ಸ್ವತಃ ಪ್ರಕಾಶ್ ಪಡುಕೋಣೆ ಖಾಸಗಿ ವಾಹಿನಿಯೊಂದರ ಸಂದರ್ಶನ ವೇಳೆ ತಿಳಿಸಿದ್ದಾರೆ.