Select Your Language

Notifications

webdunia
webdunia
webdunia
webdunia

ರಣಬೀರ್ ಕಪೂರ್ ರಿಂದಾಗಿ ಕಣ್ಣೀರು ಹಾಕಿದ್ದ ರಶ್ಮಿಕಾ ಮಂದಣ್ಣ

ರಣಬೀರ್ ಕಪೂರ್ ರಿಂದಾಗಿ ಕಣ್ಣೀರು ಹಾಕಿದ್ದ ರಶ್ಮಿಕಾ ಮಂದಣ್ಣ
ಮುಂಬೈ , ಭಾನುವಾರ, 9 ಅಕ್ಟೋಬರ್ 2022 (08:30 IST)
WD
ಮುಂಬೈ: ಆನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಗೆ ನಾಯಕಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಸೆಟ್ ನಲ್ಲಿ ನಡೆದಿದ್ದ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಆನಿಮಲ್ ಸಿನಿಮಾ ಚಿತ್ರೀಕರಣ ವೇಳೆ ರಶ್ಮಿಕಾ ಮಂದಣ್ಣ ಒಂದು ದಿನ ಬ್ರೇಕ್ ಫಾಸ್ಟ್ ತುಂಬಾ ಕೆಟ್ಟದಾಗಿದೆ ಎಂದಿದ್ದರಂತೆ. ಮರುದಿನ ರಣಬೀರ್ ಕಪೂರ್ ತಮ್ಮದೇ ಶೆಫ್ ಕೈಯಲ್ಲಿ ಅದೇ ತಿಂಡಿಯನ್ನು ಸಖತ್ ಆಗಿ ಮಾಡಿಸಿಕೊಂಡು ಬಂದು ರಶ್ಮಿಕಾಗೆ ಕೊಟ್ಟರಂತೆ.

ಇದನ್ನು ನೋಡಿ ರಶ್ಮಿಕಾಗೆ ಕಣ್ಣೀರೇ ಬಂತಂತೆ. ರಣಬೀರ್ ತಮ್ಮ ಶೆಫ್ ಕೈಯಲ್ಲಿ ಮಾಡಿಸಿಕೊಂಡು ಬಂದಿದ್ದ ಅಡುಗೆ ಅಷ್ಟು ಅದ್ಭುತವಾಗಿತ್ತಂತೆ. ಆಗ ರಣಬೀರ್ ಆ ಕೆಟ್ಟ ಅಡುಗೆಯನ್ನು ಹೇಗೆ ತಿನ್ನುತ್ತೀರಿ ಎಂದು ಕಿಚಾಯಿಸಿದರಂತೆ. ಆದರೆ ನಿಮ್ಮ ಶೆಫ್ ಅದ್ಭುತ. ನಮಗೆ ಇಂತಹ ಭಾಗ್ಯವಿಲ್ಲ ಎಂದು ರಶ್ಮಿಕಾ ಹೇಳಿದರಂತೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಸಿನಿಮಾದಲ್ಲಿ ಚಂದನ್​ ಶೆಟ್ಟಿ