Select Your Language

Notifications

webdunia
webdunia
webdunia
webdunia

Rape Case: ನಾಳೆ ಸಿನಿಮಾ ರೀಲಿಸ್ ಖುಷಿಯಲ್ಲಿದ್ದ ನಟ ಮಡೆನೂರು ಮನು ಅರೆಸ್ಟ್‌

ರೇಪ್ ಕೇಸ್

Sampriya

ಬೆಂಗಳೂರು , ಗುರುವಾರ, 22 ಮೇ 2025 (15:39 IST)
Photo Credit X
ಬೆಂಗಳೂರು: ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದ ಹಾಗೇ ನಾಪತ್ತೆಯಾಗಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ, ಮಡೆನೂರು ಮನುವನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.  

ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಹಾಸನದ ಶಾಂತಿಗ್ರಾಮದ ಮಡೆನೂರಿನಲ್ಲಿ ತಲೆಮರೆಸಿಕೊಂಡಿದ್ದ ಮನುವನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಸಂಭಾವನೆ ನೀಡುವ ನೆಪದಲ್ಲಿ ಬಂದು ನನ್ನ ಮೇಲೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಸಹ ಕಲಾವಿದೆ ದೂರು ನೀಡಿದ್ದರು.

ಮಡೆನೂರು ಮನು ಕುಲದಲ್ಲಿ ಕೀಳ್ಯಾವುದೊ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ನಾಳೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಹೊತ್ತಲ್ಲೇ ನಟನ ಮೇಲೆ ಎಫ್‌ಐಆರ್‌ ದಾಖಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ದುಲ್‌ ಕಲಾಂ ಪಾತ್ರಕ್ಕೆ ಜೀವತುಂಬಲಿದ್ದಾರೆ ಧನುಷ್‌: ತೆರೆ ಮೇಲೆ ಬರಲಿದೆ ಮಿಸೈಲ್ ಮ್ಯಾನ್ ಕಹಾನಿ