Select Your Language

Notifications

webdunia
webdunia
webdunia
webdunia

ಅಬ್ದುಲ್‌ ಕಲಾಂ ಪಾತ್ರಕ್ಕೆ ಜೀವತುಂಬಲಿದ್ದಾರೆ ಧನುಷ್‌: ತೆರೆ ಮೇಲೆ ಬರಲಿದೆ ಮಿಸೈಲ್ ಮ್ಯಾನ್ ಕಹಾನಿ

Bollywood director Om Raut, Kalam: The Missile Man of India, Kollywood actor Dhanush

Sampriya

ಮುಂಬೈ , ಗುರುವಾರ, 22 ಮೇ 2025 (14:19 IST)
Photo Courtesy X
ಮುಂಬೈ: ಬಾಲಿವುಡ್‌ ನಿರ್ದೇಶಕ ಓಂ ರಾವುತ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ಧಾರೆ. ಬುಧವಾರ ರಾತ್ರಿ 78ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಓಂ ರಾವುತ್ ತನ್ನ ಬಹುನಿರೀಕ್ಷಿತ ಸಿನಿಮಾವನ್ನು ಘೋಷಿಸಿದ್ದಾರೆ. ಆ ಸಿನಿಮಾಕ್ಕೆ ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಸಿನಿಮಾಕ್ಕೆ ಟೈಟಲ್‌ ಇಡಲಾಗಿದೆ.

ತಮಿಳು ಸೂಪರ್‌ ಸ್ಟಾರ್‌ ಧನುಷ್‌ ಅಬ್ದುಲ್‌ ಕಲಾಂ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಮ್ಮದೇ ಆದ ಡಾ. ಎಪಿಜೆ ಅಬ್ದುಲ್ ಕಲಾಂ ಸರ್, ಅಂತಹ ಸ್ಪೂರ್ತಿದಾಯಕ ಮತ್ತು ಉದಾತ್ತ ನಾಯಕನ ಜೀವನವನ್ನು ಚಿತ್ರಿಸಲು ನಾನು ನಿಜವಾಗಿಯೂ ಧನ್ಯ ಮತ್ತು ಅತ್ಯಂತ ವಿನಮ್ರನಾಗಿದ್ದೇನೆ ಎಂದು ಧನುಷ್‌ ಬರೆದುಕೊಂಡಿದ್ದಾರೆ.

ರಾಮೇಶ್ವರಂನಿಂದ ರಾಷ್ಟ್ರಪತಿ ಭವನಕ್ಕೆ ದಂತಕಥೆಯ ಪ್ರಯಾಣ ಪ್ರಾರಂಭವಾಗುತ್ತದೆ. ಭಾರತದ ಮಿಸೈಲ್ ಮ್ಯಾನ್ ಬೆಳ್ಳಿತೆರೆಗೆ ಬರುತ್ತಿದ್ದಾರೆ. ದೊಡ್ಡ ಕನಸು ಕಾಣಿರಿ. ಎತ್ತರಕ್ಕೆ ಏರಿ ಎಂದು ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿ ಬರೆದುಕೊಂಡಿದ್ದಾರೆ.

ಮಾಜಿ ರಾಷ್ಟ್ರಪತಿ ಮತ್ತು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಬದುಕನ್ನು ತೆರೆ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ಚಿತ್ರದ ರಿಲೀಸ್‌ ಡೇಟ್‌ ಹಾಗೂ ಇತರೆ ಯಾವ ಮಾಹಿತಿಯನ್ನು ಕೂಡ ಸದ್ಯ ಚಿತ್ರತಂಡ ಹಂಚಿಕೊಂಡಿಲ್ಲ.

ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಸಿನಿಮಾವನ್ನು ಅಭಿಷೇಕ್ ಅಗರ್ವಾಲ್‌, ಭೂಷಣ್ ಕುಮಾರ್, ಕ್ರಿಷನ್ ಕುಮಾರ್, ಅನಿಲ್ ಸುಂಕರ ನಿರ್ಮಾಣ ಮಾಡುತ್ತಿದ್ದಾರೆ. ಸೈವಿನ್ ಕ್ವಾಡ್ರಾಸ್ ಅವರು ಈ ಸಿನಿಮಾಗೆ ಚಿತ್ರಕಥೆ ಬರೆಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ ಚಿತ್ರೋತ್ಸವದಲ್ಲಿ ಎದ್ದು ಕಾಣುವಂತೆ ಸಿಂಧೂರ ಧರಿಸಿ ಸೀರೆಯುಟ್ಟು ಮಿರಮಿಂಚಿದ ನಟಿ ಐಶ್ವರ್ಯಾ ರೈ