ಚೆನ್ನೈ: ತಮಿಳು ನಟ ಜಯಂ ರವಿ ಮತ್ತು ಪತ್ನಿ ಆರತಿ ಪರಸ್ಪರ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ವಿಚ್ಛೇದನದ ವೇಳೆ ಜೀವನಾಂಶವಾಗಿ ಆರತಿ ಕೇಳಿರುವ ಹಣದ ಮೊತ್ತ ತಿಳಿದರೆ ನಿಜಕ್ಕೂ ಶಾಕ್ ಆಗುವಂತಿದೆ.
ಜಯಂ ರವಿ ಮತ್ತು ಆರತಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರಿಗೂ ಸಂಬಂಧ ಸರಿಪಡಿಸುವ ಯಾವುದೇ ಇರಾದೆಯಿಲ್ಲ. ಹೀಗಾಗಿ ಸದ್ಯದಲ್ಲೇ ಕೋರ್ಟ್ ಕೂಡಾ ವಿಚ್ಛೇದನ ಮಾನ್ಯ ಮಾಡಲಿದೆ.
ಆದರೆ ಜೀವನಾಂಶವಾಗಿ ಆರತಿ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂ. ನೀಡಲು ಬೇಡಿಕೆಯಿಟ್ಟಿದ್ದಾರಂತೆ. ಅಂದರೆ ವರ್ಷಕ್ಕೆ 4.8 ಕೋಟಿ ರೂ.ಗಳಷ್ಟು ಜೀವನಾಂಶ ನೀಡಬೇಕಿದೆ. ಇದನ್ನು ಕೋರ್ಟ್ ಮಾನ್ಯ ಮಾಡುತ್ತಾ ಕಾದು ನೋಡಬೇಕಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ವಿಚ್ಛೇದನವಾಗುವಾಗ ಅವರು ನೀಡುವ ಜೀವನಾಂಶವೇ ಸುದ್ದಿಯಾಗುತ್ತದೆ. ಇದೀಗ ಜಯಂ ರವಿಗೆ ಜೀವನಾಂಶದ ಮೊತ್ತದ ಬಗ್ಗೆ ಮಾಹಿತಿ ನೀಡಲಾಗಿದ್ದು ವಿಚಾರಣೆಯನ್ನು ಜೂನ್ 12 ಕ್ಕೆ ಮುಂದೂಡಲಾಗಿದೆ. ಇದಕ್ಕೆ ಜಯಂ ರವಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ನೋಡಬೇಕಿದೆ.