ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿರುವ ನಟಿ, ನಿರ್ದೇಶಕಿ ರಂಜನಿ ರಾಘವನ್ ಗಣೇಶ್ ಅವರ ಹೊಸ ಮುಖವೊಂದರ ಪರಿಚಯ ಮಾಡಿಸಿದ್ದಾರೆ.
ಗಣೇಶ್ ಇಂದು 46 ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ತಮ್ಮ ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿರುವ ಕಾರಣ ಈ ಬಾರಿಯೂ ಅಭಿಮಾನಿಗಳೊಂದಿಗೆ ಅವರು ಹುಟ್ಟುಹಬ್ಬ ಆಚರಿಸುತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಅವರಿಗೆ ಶುಭ ಕೋರುತ್ತಿದ್ದಾರೆ.
ನಟಿ ರಂಜನಿ ರಾಘವನ್ ಕೂಡಾ ಇನ್ ಸ್ಟಾಗ್ರಾಂ ಪುಟದಲ್ಲಿ ಗಣೇಶ್ ಮತ್ತು ಮಕ್ಕಳೊಂದಿಗಿರುವ ಫೋಟೋ ಪ್ರಕಟಿಸಿ ಅವರ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿದ್ದಾರೆ.
ಸದಾ ನಗಿಸ್ತಾ ತುಂಟಾಟ ಮಾಡೋ ಗೋಲ್ಡನ್ ಸ್ಟಾರ್ ಎಲ್ರಿಗೂ ಗೊತ್ತು. ಬಟ್ ನನಗೆ ನಮ್ಮ ಡಿ ಡಿ ಢಿಕ್ಕಿ ಸಿನಿಮಾ ಮೂಲಕ ದೊರಕಿದ ಒಡನಾಟದಿಂದ ಗಣೇಶ್ ಸರ್ ವ್ಯಕ್ತಿತ್ವದ ಇನ್ನಷ್ಟು ಇಂಟ್ರೆಸ್ಟಿಂಗ್ ವಿಚಾರಗಳ ಪರಿಚಯ ಆಯ್ತು. ನಮ್ಮೆಲ್ಲರ ಪ್ರೀತಿಯ ಗಣಿ ತೋರಿಕೆಗಷ್ಟೇ ಅಲ್ಲ ನಿಇಜವಾಗಿಯೂ ತಮ್ಮ ಮಕ್ಕಳಿಗೆ ಕನ್ನಡ ಪ್ರೀತಿ ಕಲಿಸಿಕೊಟ್ಟಿದ್ದಾರೆ. ಸಮಯ ಪ್ರಜ್ಞೆಯ ಮಹತ್ವವೂ ತಿಳಿಸಿದ್ದಾರೆ. ಅವರ್ಲಿ ನಮ್ಮ ಸಂಸ್ಕೃತಿ ಸಮಾಜದ ಬಗ್ಗೆ ಕಾಳಜಿ ಇರೋ ಚಿಂತಕ ಇದ್ದಾರೆ. ಹಾಗೇ ಕಾನೂನು ಇರಲಿ, ಜ್ಯೋತಿಷ್ಯ ಶಾಸ್ತ್ರವಿರಲಿ ಹೊಸ ವಿದ್ಯೆಯನ್ನು ಅಧ್ಯಯನ ಮಾಡ್ತಿರೋ ವಿದ್ಯಾರ್ಥಿ ಅವರಾಗಿದ್ದಾರೆ. ಹೀಗೆ ಬಹುಮುಖ ವ್ಯಕ್ತಿತ್ವ ಇರೋ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಸರ್ ಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ರಂಜನಿ ಬರೆದುಕೊಂಡಿದ್ದಾರೆ.