Publish Date: Thu, 21 May 2020 (16:52 IST)
Updated Date: Thu, 21 May 2020 (16:54 IST)
ಹೈದರಾಬಾದ್: ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಟ್ಟಿ ತಮ್ಮ ಗೆಳತಿ ಮಿಹಿಕಾ ಬಜಾಜ್ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಮೊದಲು ರಾಣಾ, ಮಿಹಿಕಾ ಜತೆಗಿನ ತಮ್ಮ ಪ್ರೇಮವನ್ನು ಬಹಿರಂಗಪಡಿಸಿದ್ದರು. ಇದೀಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿರುವುದಾಗಿ ಫೋಟೋ ಸಮೇತ ಬರೆದುಕೊಂಡಿದ್ದಾರೆ. ಆದರೆ ಎಂಗೇಜ್ ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಟ ಬಿಟ್ಟುಕೊಟ್ಟಿಲ್ಲ.