ನಮ್ಮವರೇ ಆದ ದರ್ಶನ್, ಸುದೀಪ್, ಯಶ್ ಗಿಂತ ರಮ್ಯಾಗೆ ಪಕ್ಕದ ಧನುಷ್ ಹೆಚ್ಚಾದರೇ?!

ಸೋಮವಾರ, 21 ಜನವರಿ 2019 (09:23 IST)
ಬೆಂಗಳೂರು: ಇತ್ತೀಚೆಗೆ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಏನು ಮಾಡಿದರೂ ಅಭಿಮಾನಿಗಳಿಂದ ಟ್ರೋಲ್ ಗೊಳಗಾಗುತ್ತಿದ್ದಾರೆ. ಅಂಬರೀಶ್ ನಿಧನರಾದಾಗ ಕಾಲು ನೋವಿನ ನೆಪ ಹೇಳಿ ತಪ್ಪಿಸಿಕೊಂಡಿದ್ದಕ್ಕೆ ಟೀಕೆಗೊಳಗಾಗಿದ್ದ ರಮ್ಯಾ ಇದೀಗ ಮತ್ತೆ ಟ್ರೋಲ್ ಗೊಳಗಾಗಿದ್ದಾರೆ.


ಈಗ ತಮಿಳುನಟ ಧನುಷ್ ಗೆ ಅವರ ‘ರೌಡಿ ಬೇಬಿ’ ಹಾಡಿಗೆ 100 ಮಿಲಿಯನ್ ವೀಕ್ಷಣೆ ಪಡೆದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇ ರಮ್ಯಾಗೆ ಮುಳುವಾಗಿದೆ. ಟ್ವಿಟರ್ ನಲ್ಲಿ ಈ ರೀತಿಯಾಗಿ ಪಕ್ಕದ ರಾಜ್ಯದ ಸಿನಿಮಾ ನಟರಿಗೆ ಅಭಿನಂದಿಸಲು ರಮ್ಯಾಗೆ ಪುರುಸೊತ್ತಿದೆ. ಆದರೆ ನಮ್ಮದೇ ಸಿನಿಮಾ ಕೆಜಿಎಫ್ ಬಗ್ಗೆ ತುಟಿಪಿಟಕ್ ಅಂದಿರಲಿಲ್ಲ. ದರ್ಶನ್ ಯಜಮಾನ, ಸುದೀಪ್ ಪೈಲ್ವಾನ್ ಸಿನಿಮಾ ಬಗ್ಗೆ ಕಾಮೆಂಟ್ ಮಾಡಬೇಕು ಅನಿಸಲಿಲ್ವಾ? ಎಂದು ಟ್ವಿಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದೊಳಗಿನ ವಿದ್ಯಮಾನಗಳ ಬಗ್ಗೆಯೂ ಮಾತಾಡಿ. ನಿಮ್ಮದೇ ಪಕ್ಷದವರು ರೆಸಾರ್ಟ್ ನಲ್ಲಿ ಗಲಾಟೆ ಮಾಡುತ್ತಿದ್ದಾರಲ್ಲಾ ಅದರ ಬಗ್ಗೆಯೂ ಒಂದೆರಡು ಕಾಮೆಂಟ್ ಬರೆಯಿರಿ ಎಂದು ಟ್ವಿಟರಿಗರು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡಾಕ್ಟರೇಟು ಪಡೆದ ಪತ್ನಿಯನ್ನು ಜಗ್ಗೇಶ್ ಕರೆದುಕೊಂಡು ಹೋಗಿದ್ದಾದರೂ ಎಲ್ಲಿಗೆ?!