ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದಿನಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಆರಂಭ ಪಡೆದಿದೆ.
ನಿನ್ನೆ ಪ್ರೀಮಿಯರ್ ಶೋ ವೀಕ್ಷಿಸಿದ ನಟಿ ರಮ್ಯಾ ಗಂಧದ ಗುಡಿ ಬಗ್ಗೆ ಹೊಗಳಿ ಬರೆದಿದ್ದು, ಹೊಸ ಪ್ರತಿಜ್ಞೆ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಗಂಧದ ಗುಡಿಯಲ್ಲಿ ಪರಿಸರ ಸಂರಕ್ಷಣೆ ಕುರಿತು ಉತ್ತಮ ಸಂದೇಶವಿದೆ. ಹೀಗಾಗಿ ಇನ್ಮುಂದೆ ನಾನು ಆದಷ್ಟು ಯಾವುದೇ ರೀತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದೇ ಪರಿಸರ ಸಂರಕ್ಷಣೆಗೆ ಕೈ ಜೋಡಿಸುವುದಾಗಿ ರಮ್ಯಾ ಪ್ರತಿಜ್ಞೆ ಕೈಗೊಂಡಿದ್ದಾರೆ.
-Edited by Rajesh Patil