Publish Date: Fri, 28 Oct 2022 (08:20 IST)
Updated Date: Fri, 28 Oct 2022 (08:45 IST)
ಬೆಂಗಳೂರು: ನಿನ್ನೆಯಷ್ಟೇ ಬಿಸಿಸಿಐ ಪುರುಷ ಕ್ರಿಕೆಟಿಗರಂತೆ ಮಹಿಳಾ ಕ್ರಿಕೆಟಿಗರೂ ಸಮಾನ ವೇತನ ನೀಡುವ ನಿರ್ಧಾರ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ನಟಿ ರಮ್ಯಾ ತಮ್ಮದೊಂದು ಆಗ್ರಹ ಮಂಡಿಸಿದ್ದಾರೆ.
ಸಿನಿಮಾ ರಂಗದಲ್ಲೂ ಮಹಿಳೆ ಮತ್ತು ಪುರುಷ ಕಲಾವಿದರ ಸಂಭಾವನೆಗೆ ತೀರಾ ವ್ಯತ್ಯಾಸವಿದೆ. ಎಷ್ಟೇ ದೊಡ್ಡ ಹೀರೋಯಿನ್ ಆಗಿದ್ದರೂ ಮಹಿಳಾ ಕಲಾವಿದರಿಗೆ ಸಿಗುವ ಸಂಭಾವನೆ ಪುರುಷರಿಗೆ ಹೋಲಿಸಿದರೆ ತೀರಾ ಕಡಿಮೆ.
ಇದರ ಬಗ್ಗೆ ಇದೀಗ ರಮ್ಯಾ ಧ್ವನಿಯೆತ್ತಿದ್ದಾರೆ. ಬಿಸಿಸಿಐ ಸಮಾನ ವೇತನ ನಿರ್ಧಾರವನ್ನು ಶ್ಲಾಘಿಸಿರುವ ರಮ್ಯಾ ನಮ್ಮ ಸಿನಿಮಾ ರಂಗದಲ್ಲೂ ಈ ರೀತಿ ಪುರುಷ ಮತ್ತು ಮಹಿಳಾ ಕಲಾವಿದರ ನಡುವೆ ವೇತನ ಸಮಾನತೆ ಬರಲಿ ಎಂದು ಆಗ್ರಹಿಸಿದ್ದಾರೆ.
-Edited by Rajesh Patil