Select Your Language

Notifications

webdunia
webdunia
webdunia
webdunia

ಸಂಜು ಮತ್ತೆ ಗೀತಾ ಸಿನಿಮಾ ಕಂಪ್ಲೀಟ್ ಆಗಿದ್ದೇ ರಮ್ಯಾರಿಂದ

ಸಂಜು ಮತ್ತೆ ಗೀತಾ ಸಿನಿಮಾ ಕಂಪ್ಲೀಟ್ ಆಗಿದ್ದೇ ರಮ್ಯಾರಿಂದ
ಬೆಂಗಳೂರು , ಭಾನುವಾರ, 26 ಮಾರ್ಚ್ 2023 (09:30 IST)
Photo Courtesy: Twitter
ಬೆಂಗಳೂರು: ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾವಾದ ಸಂಜು ಮತ್ತು ಗೀತಾ ಸಿನಿಮಾ ಬಗ್ಗೆ ನಿರ್ದೇಶಕ ನಾಗಶೇಖರ್ ಅಪರೂಪದ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಎಪಿಸೋಡ್ ನಲ್ಲಿ ರಮ್ಯಾ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಸಂಜು ಮತ್ತು ಗೀತಾ ಸಿನಿಮಾದಲ್ಲಿ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ನಿರ್ದೇಶಕ ನಾಗಶೇಖರ್ ಮತ್ತು ಕಿಟ್ಟಿ ನಿನ್ನೆಯ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ರಮ್ಯಾಗೆ ಸಂಜು ಮತ್ತು ಗೀತಾ ಸಿನಿಮಾದ ಕ್ಲಾಪ್ ಬೋರ್ಡ್ ಉಡುಗೊರೆ ಕೊಟ್ಟ ನಿರ್ದೇಶಕ ನಾಗಶೇಖರ್ ಈ ಸಿನಿಮಾ ಕಂಪ್ಲೀಟ್ ಆಗಿದ್ದೇ ರಮ್ಯಾರಿಂದ. ಹಣವಿಲ್ಲದೇ ಸಿನಿಮಾ ಎರಡೂವರೆ ವರ್ಷ ನಿಂತು ಹೋಗಿತ್ತು. ಆಗ ರಮ್ಯಾ ಸ್ವತಃ ದುಡ್ಡು ಕೊಟ್ಟು ಈ ಸಿನಿಮಾ ಕಂಪ್ಲೀಟ್ ಆಗುವ ಹಾಗೆ ನೋಡಿಕೊಂಡರು ಎಂದಿದ್ದಾರೆ. ಇನ್ನು ರಮ್ಯಾಗೆ ಸ್ವಾಂಡಲ್ ವುಡ್ ಕ್ವೀನ್ ಎಂಬ ಹೆಸರು ಬಂದಿದ್ದೂ ಇದೇ ಸಿನಿಮಾದಿಂದ ಅಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರಾ ಜ್ಯೂ.ಎನ್ ಟಿಆರ್