ಬೆಂಗಳೂರು: ಈ ಬಾರಿಯ ದೀಪಾವಳಿ ಹಬ್ಬ ಎಲ್ಲರಿಗೂ ಒಂದು ರೀತಿಯಲ್ಲಿ ವಿಶೇಷವೇ. ಕೊರೋನಾ ನಡುವೆಯೂ ಆರೋಗ್ಯ, ಪರಿಸರ ಕಾಳಜಿ ವಹಿಸಿ ಎಲ್ಲರೂ ದೀಪಾವಳಿ ಹಬ್ಬ ಆಚರಿಸಬೇಕಿದೆ.
ಹೀಗಾಗಿ ಈ ವಿಶೇಷ ದೀಪಾವಳಿಗೆ ನಟ ರಮೇಶ್ ಅರವಿಂದ್ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ವೈರಸ್, ಲಾಕ್ ಡೌನ್, ತೊಂದರೆಗೊಳಗಾದ ದೈನಂದಿನ ದಿನಚರಿ, ಆತಂಕಕ್ಕೊಳಗಾದ ಆರೋಗ್ಯ ಕಾಳಜಿಗಳು, ಕುಗ್ಗುತ್ತಿರುವ ಬ್ಯಾಂಕ್ ಬ್ಯಾಲೆನ್ಸ್- ಖಂಡಿತವಾಗಿ, 2020 ನಮ್ಮನ್ನು ಕತ್ತಲೆಯಾದ ಮನಸ್ಥಿತಿಗೆ ತಂದಿದೆ. ಬದಲಾಗುವ ಸಮಯ. ಮನಸ್ಥಿತಿಯನ್ನು ಬದಲಾಯಿಸೋಣ. ಸಂತೋಷವನ್ನು ಆರಿಸಿ. ನಗುವಿನ ಶಬ್ಧವನ್ನು ಆರಿಸಿ, ನಿಮ್ಮ ಜೀವನ ಮತ್ತು ಇತರರ ಜೀವವನ್ನು ಬೆಳಗಿಸಲು ಆಯ್ಕೆ ಮಾಡಿ. ದೀಪಾವಳಿಯ ಶುಭಾಷಯಗಳು ಎಂದು ರಮೇಶ್ ತಾತ್ವಿಕವಾಗಿ ವಿಶ್ ಮಾಡಿದ್ದಾರೆ.