Select Your Language

Notifications

webdunia
webdunia
webdunia
webdunia

ಎಲ್ಲೇ ಹೋದ್ರೂ ದೇವರನ್ನು ಬಿಡಲ್ಲ ರಾಮ್ ಚರಣ್, ಪತ್ನಿ ಉಪಾಸನಾ!

ರಾಮ್ ಚರಣ್ ತೇಜ
ಹೈದರಾಬಾದ್ , ಬುಧವಾರ, 15 ಮಾರ್ಚ್ 2023 (09:10 IST)
Photo Courtesy: Twitter
ಹೈದರಾಬಾದ್: ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ತೇಜ ಮತ್ತು ಪತ್ನಿ ಉಪಾಸನಾ ದೈವ ಭಕ್ತಿ ಎಲ್ಲರಿಗೂ ಗೊತ್ತಿರುವಂತದ್ದೇ.

ರಾಮಚರಣ್ ಅಮೆರಿಕಾಗೆ ತೆರಳುವ ಮುನ್ನ ಅಯ್ಯಪ್ಪ ಮಾಲಧಾರಿಯಾಗಿ ಬರಿಗಾಲಲ್ಲಿ ತೆರಳಿದ್ದರು. ಇದೀಗ ಅಮೆರಿಕಾದಲ್ಲಿ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ತೆರಳುವ ಮುನ್ನ ಪತ್ನಿ ಉಪಾಸನಾ ಜೊತೆ ದೇವರಿಗೆ ನಮಸ್ಕರಿಸುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ರಾಮ್ ಚರಣ್ ಹೇಳಿಕೊಂಡಿದ್ದಾರೆ. ‘ನಾನು ನನ್ನ ಪತ್ನಿ ಎಲ್ಲೇ ಹೋದರೂ ಈ ದೇವರ ವಿಗ್ರಹವನ್ನು ಜೊತೆಗೇ ಕರೆದೊಯ್ಯುತ್ತೇವೆ. ಇದರಿಂದ ನಾವು ಯಾವುದೇ ದೇಶಕ್ಕೇ ಹೋದರೂ ದೇವರು ಮತ್ತು ಭಾರತದ ಜೊತೆಗೆ ಕನೆಕ್ಷನ್ ಇರುತ್ತದೆ. ಪ್ರತಿನಿತ್ಯ ನಮ್ಮನ್ನು ಈ ಮಟ್ಟಕ್ಕೆ ತಲುಪಿಸಿದ ಶಕ್ತಿಗೆ ಕೈ ಮುಗಿದು ದಿನದ ಆರಂಭ ಮಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ರಾಮ್ ಚರಣ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಯೋ ನಿರ್ದೇಶಕರ ಬರ್ತ್ ಡೇ ಪಾರ್ಟಿಯಲ್ಲಿ ತ್ರಿಶಾ: ರೂಮರ್ ಗಳಿಗೆ ಬಿತ್ತು ತೆರೆ