Daily Horoscope

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

Krishnaveni K
ಶನಿವಾರ, 7 ಜೂನ್ 2025 (11:09 IST)
Photo Credit: X
ಬೆಂಗಳೂರು: ಕಮಲ್ ಹಾಸನ್ ಬಳಿಕ ಈಗ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ. ಅಮಿತಾಭ್ ಬಚ್ಚನ್ ಸಿನಿಮಾಗಳನ್ನು ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರು ಎಂದಿದ್ದಾರೆ.

ಇತ್ತೀಚೆಗೆ ಕಮಲ್ ಹಾಸನ್ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ಕಾರಣಕ್ಕೆ ಕಮಲ್ ಸಿನಿಮಾ ಥಗ್ ಲೈಫ್ ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ನಿಷೇಧ ಹೇರಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಮ್ ಗೋಪಾಲ್ ವರ್ಮ ಇದು ಹೊಸ ರೀತಿಯ ಗೂಂಡಾಗಿರಿ ಎಂದಿದ್ದರು.

ಇದೀಗ ಅಣ್ಣಾವ್ರು ಡಾ ರಾಜ್ ಕುಮಾರ್ ಬಗ್ಗೆಯೇ ನಾಲಿಗೆ ಹರಿಬಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ’70-80 ರ ದಶಕದಲ್ಲಿ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ಅನೇಕರು ಹೆಸರು ಮಾಡಿದರು. ರಜನೀಕಾಂತ್, ಚಿರಂಜೀವಿ, ರಾಜ್ ಕುಮಾರ್ ಅವರಂತಹ ನಟರು ಈ ರಿಮೇಕ್ ಗಳ ಮೂಲಕ ಜನಪ್ರಿಯತೆ ಪಡೆದರು. 90 ರ ದಶಕದಲ್ಲಿ ಬಚ್ಚನ್ ಐದು ವರ್ಷ ಬ್ರೇಕ್ ತೆಗೆದುಕೊಂಡರು. ಆಗ ದಕ್ಷಿಣದ ನಟರು ಅವರ ಸಿನಿಮಾಗಳಂತೆ ಮಸಾಲಾ ರೀತಿಯಲ್ಲಿ ಕತೆ ಹೇಳುವುದನ್ನು ಮುಂದುವರಿಸಿದರು’ ಎಂದಿದ್ದಾರೆ.

ಡಾ ರಾಜ್ ಪೌರಾಣಿಕ ಕತೆಗಳು, ಕಾದಂಬರಿ ಆಧಾರಿತ ಕತೆಗಳ ಸಿನಿಮಾಗಳನ್ನೇ ಮಾಡುತ್ತಿದ್ದವರು. ಅವರ ಬಗ್ಗೆ ಇಂತಹ ಕ್ಷುಲ್ಲುಕ ಹೇಳಿಕೆ ನೀಡಿರುವ ರಾಮ್ ಗೋಪಾಲ್ ವರ್ಮಾ ಬಗ್ಗೆ ಈಗ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಅಕುಲ್ ಬಾಲಾಜಿ ಆಂಕರ್ ಮಾಡುತ್ತಿರಬೇಕಾದರೆ ಬಾಟಲಿ ಎಸೆದ ತೆಲುಗು ನಟ ರಾಣಾ: Video

BBK13: ನಾಲಾಯಕ್ ನನ್ ಮಕ್ಳು, ಬಳೆ ತೊಟ್ಕೊಂಡು ಕೂರಿ ಎಂದ ಕಿರಣ್ ಶಾಸ್ತ್ರಿ: ಎಲ್ಲೆ ಮೀರುತ್ತಿದ್ದಾರಾ ಕಾಮನ್ ಸ್ಪರ್ಧಿಗಳು video

BBK13: ದೊಡ್ಮನೆಗೆ ಫ್ಲೈಟ್ ತಂಡ ಬಂದ ಮೇಲೆ ಸೈಲೆಂಟ್ ಆದರಾ ಗಗನ್, ತಾಂಡವ್

ಮನೆಗೆ ಬಂದ ಜಗ್ಗೇಶ್‌ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಶಿವರಾಜ್‌ಕುಮಾರ್ ದಂಪತಿ

ಮುಂದಿನ ಸುದ್ದಿ
Show comments