Select Your Language

Notifications

webdunia
webdunia
webdunia
webdunia

ಖಾಸಗಿ ಜೆಟ್ ನಲ್ಲಿ ಮೈಸೂರಿಗೆ ಬಂದ ರಾಮ್ ಚರಣ್

Ramcharan
ಮೈಸೂರು , ಗುರುವಾರ, 23 ನವೆಂಬರ್ 2023 (17:08 IST)
ಮೈಸೂರು: ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜ ಈಗ ಮೈಸೂರಿನಲ್ಲಿದ್ದಾರೆ. ಖಾಸಗಿ ಜೆಟ್ ನಲ್ಲಿ ಅವರು ಸ್ಟೈಲಿಶ್ ಲುಕ್ ನಲ್ಲಿ ಮೈಸೂರಿಗೆ ಬಂದಿಳಿದಿದ್ದಾರೆ.

ರಾಮ್ ಚರಣ್ ಅಭಿನಯದ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಕಾರಣಕ್ಕೆ ಚಿತ್ರೀಕರಣದಲ್ಲಿ ಭಾಗಿಯಾಗಲು ಅವರು ತಮ್ಮ ಖಾಸಗಿ ಜೆಟ್ ನಲ್ಲಿ ಸಾಂಸ್ಕೃತಿಕ ನಗರಿಗೆ ಬಂದಿಳಿದಿದ್ದಾರೆ.

ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು, ರಾಮ್ ಚರಣ್ ಮತ್ತು ಕಿಯಾರಾ ಈ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರೀಕರಣದ ದೃಶ್ಯ ಸೋರಿಕೆ ಮಾಡಿದ ವಿಚಾರದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಹೀಗಾಗಿಯೇ ಚಿತ್ರೀಕರಣ ಮೈಸೂರಿಗೆ ಶಿಫ್ಟ್ ಆಗಿರಬಹುದು ಎನ್ನಲಾಗಿದೆ.

ರಾಮ್ ಚರಣ್ ಸಿನಿಮಾ ಎಂದರೆ ಅಭಿಮಾನಿಗಳಲ್ಲಿ ಕುತೂಹಲವಿರುತ್ತದೆ.  ಈ ನಡುವೆ ಸೋರಿಕೆ ಕಾಟದಿಂದ ಚಿತ್ರತಂಡ ಬೆಸತ್ತಿದೆ. ನಿರ್ದೇಶಕ  ಶಂಕರ್ ಗೆ ಇದು ತೆಲುಗಿನಲ್ಲಿ ಮೊದಲ ಸಿನಿಮಾ. ಹೀಗಾಗಿ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜಿಎಸ್ ಉತ್ಸವದಲ್ಲಿ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಯಶ್