ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದ್ದು ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ. ಮೊದಲ ರನ್ನರ್ ಅಪ್ ಆದ ಬಳಿಕ ರಕ್ಷಿತಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ರಕ್ಷಿತಾ ಶೆಟ್ಟಿ ಫೈನಲ್ ಗೆಲ್ಲದೇ ಇದ್ದರೂ ಸಾಕಷ್ಟು ಜನರ ಪ್ರೀತಿ ಸಂಪಾದಿಸಿದ್ದಾರೆ. ರನ್ನರ್ ಅಪ್ ಆದ ಅವರು ಒಟ್ಟು 25 ಲಕ್ಷ ರೂ. ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡಿದ್ದಾರೆ. ರನ್ನರ್ ಅಪ್ ಆದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಫೈನಲ್ ಗೆ ಬಂದಿದ್ದು ಖುಷಿಯಾಗಿದೆ. ಯಾವ ಸ್ಥಾನ ಸಿಕ್ಕಿದೆ ಎನ್ನುವುದು ಮ್ಯಾಟರ್ ಆಗಲ್ಲ. ನಾನು ಇಲ್ಲಿಯವರೆಗೆ ಬಂದಿದ್ದೀನಿ. ಸಾಕಷ್ಟು ಜನರ ಪ್ರೀತಿ ಗಳಿಸಿದ್ದೀನಿ. ಟ್ರೋಫಿ ಒಂದು ಗೆದ್ದಿಲ್ಲ ಅಷ್ಟೇ. ಜನರು ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾರೆ. ನಾನೇ ವಿನ್ನರ್ ಅಲ್ವಾ ಎಂದು ಸಂತೋಷದಿಂದಲೇ ಹೇಳಿಕೆ ನೀಡಿದ್ದಾರೆ.
ಗಿಲ್ಲಿ ಗೆದ್ದಿದ್ದು ನನಗೆ ಖುಷಿಯಾಗಿದೆ. ನನಗೆ ಮೊದಲೇ ಗೊತ್ತಿತ್ತು. ಒಂದೋ ನಾನು ಇಲ್ಲಾ ಗಿಲ್ಲಿ ಗೆಲ್ತಾರೆ ಅಂತ. ಇನ್ನು ಮುಂದೆಯೂ ವ್ಲಾಗಿಂಗ್ ಮಾಡಿಕೊಂಡು ಇರ್ತೀನಿ. ದೊಡ್ಡ ದೊಡ್ಡ ಮಾತು ಹೇಳಲು ನನಗೆ ಬರಲ್ಲ. ಆದರೆ ಎಲ್ಲರ ಪ್ರೀತಿಗೆ ಥ್ಯಾಂಕ್ಸ್ ಎಂದು ರಕ್ಷಿತಾ ಹೇಳಿದ್ದಾರೆ. ಸಾಮಾನ್ಯವಾಗಿ ಸೋತಿದ್ದಕ್ಕೆ ಜನ ಬೇಸರಗೊಳ್ಳುತ್ತಾರೆ. ಆದರೆ ರಕ್ಷಿತಾ ಅದನ್ನು ನಗು ನಗುತ್ತಲೇ ಸ್ವೀಕರಿಸಿದ್ದಾರೆ.