ರಚಿತಾ ರಾಮ್ ಮೇಲೆ ರಕ್ಷಿತಾ ಪ್ರೇಮ್ ಮುನಿಸಿಕೊಂಡಿದ್ದಾರಾ? ಕ್ರೇಜಿ ಕ್ವೀನ್ ಹೇಳಿದ್ದೇನು?

Webdunia
ಗುರುವಾರ, 11 ಜುಲೈ 2019 (10:03 IST)
ಬೆಂಗಳೂರು: ಸಹೋದರ ರಾಣಾನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿರುವ ರಕ್ಷಿತಾ ಪ್ರೇಮ್ ಏಕ್ ಲವ್ಯಾ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ರಚಿತಾ ರಾಮ್ ನಾಯಕಿ ಎಂದು ಘೋಷಿಸಿದ್ದರು.


ಆದರೆ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಪಾತ್ರ ಮಾಡಿದ್ದಕ್ಕೆ ಸಾರ್ವಜನಿಕವಾಗಿ ನಾನು ಆ ಪಾತ್ರ ಮಾಡಬಾರದಿತ್ತು ಎಂದು ಗೋಳು ತೋಡಿಕೊಂಡಿದ್ದ ರಚಿತಾ ರಾಮ್ ರನ್ನು ಖಂಡಿಸಿದ ರಕ್ಷಿತಾ ತಮ್ಮ ಚಿತ್ರದಿಂದ ರಚಿತಾಗೆ ಕೊಕ್ ಕೊಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ಇಬ್ಬರ ನಡುವೆ ವೈಮನಸ್ಯವಿದೆ ಎಂಬ ಗಾಸಿಪ್ ಹಬ್ಬಿತ್ತು.

ಆ ಸುದ್ದಿಗಳಿಗೆ ಈಗ ಸ್ವತಃ ರಕ್ಷಿತಾ ಖಡಕ್ ಉತ್ತರ ಕೊಟ್ಟಿದ್ದಾರೆ. ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ತೀರ್ಪುಗಾರರಾಗಿರುವ ರಕ್ಷಿತಾ ಆ ಶೋನ ಪ್ರಿಶೂಟ್ ಸಂದರ್ಭದಲ್ಲಿ ರಚಿತಾ ಮತ್ತು ಇನ್ನೊಬ್ಬ ತೀರ್ಪುಗಾರ ಅರ್ಜುನ್ ಜನ್ಯಾ ಜತೆಗೆ ತೆಗೆಸಿಕೊಂಡ ಫೋಟೋ ಪ್ರಕಟಿಸಿದ್ದಾರೆ. ಜತೆಗೆ ನಮ್ಮ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹಬ್ಬಿಸಿದವರಿಗೆ ಉತ್ತರ ಈ ಫೋಟೋ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮಿಬ್ಬರ ಬಗ್ಗೆ ಬಂದ ಸುದ್ದಿಗಳೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಕಸಿ ಮಾಡಿಸಿದ್ದ ಸ್ತನ ತೆಗೆದ ಶೆರ್ಲಿನ್ ಚೋಪ್ರಾ, ಕಾರಣ ಹೀಗೇ ಬರೆದುಕೊಂಡಿದ್ದಾರೆ

ಹೇಮಾ ಮಾಲಿನಿಯನ್ನು ವರಿಸಲು ಧರ್ಮವನ್ನೇ ಬದಲಾಯಿಸಿದ್ರಾ ಧರ್ಮೇಂದ್ರಾ

ರಾಷ್ಟ್ರಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ಪ್ರೇಮಕಾವ್ಯ ಸೀರಿಯಲ್ ನಟಿ ವೈಷ್ಣವಿ ಎದೆ ದರ್ಶನಕ್ಕೆ ಒಳ್ಳೆ ಡ್ರೆಸ್ ತಗೊಳ್ಳಮ್ಮ ಎಂದು ನೆಟ್ಟಿಗರ ಟ್ರೋಲ್ video

ಮುಂದಿನ ಸುದ್ದಿ
Show comments