Publish Date: Fri, 05 Jun 2020 (11:27 IST)
Updated Date: Fri, 05 Jun 2020 (11:30 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಬಳಿಕ ಅಭಿನಯಿಸುತ್ತಿರುವ ಸಿನಿಮಾ ಚಾರ್ಲಿ 777. ಈ ಸಿನಿಮಾದ ಚಿತ್ರೀಕರಣ ಲಾಕ್ ಡೌನ್ ಗೂ ಮೊದಲೇ ಆರಂಭವಾಗಿತ್ತು.
ಇದರ ನಡುವೆ ಚಾರ್ಲಿ 777 ಸಿನಿಮಾದ ಕೆಲವು ಫೋಟೋಗಳು ವೈರಲ್ ಆಗಿತ್ತು. ಇದೀಗ ರಕ್ಷಿತ್ ತಮ್ಮ ಸಿನಿಮಾದ ಸ್ಪೆಷಲ್ ವಿಡಿಯೋವೊಂದು ನಾಳೆ ಬಿಡುಗಡೆಯಾಗಲಿದೆ ಎಂಬ ಹೊಸ ಸುದ್ದಿ ಕೊಟ್ಟಿದ್ದಾರೆ.
ಸ್ವತಃ ರಕ್ಷಿತ್ ಗೇ ಈ ವಿಡಿಯೋ ಸರ್ಪ್ರೈಸ್ ಆಗಲಿದೆಯಂತೆ. ಕಿರಣ್ ರಾಜ್ ಈ ಸಿನಿಮಾದ ನಿರ್ದೇಶಕರು. ರಕ್ಷಿತ್ ಜತೆಗೆ ನಾಯಿಯೊಂದು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ.