Select Your Language

Notifications

webdunia
webdunia
webdunia
Thursday, 24 April 2025
webdunia

ಭಾವಿ ಮಡದಿ ರಶ್ಮಿಕಾ ನೋಡಿ ರಕ್ಷಿತ್ ಶೆಟ್ಟಿ ಹೊಗಳಿದ್ದೇ ಹೊಗಳಿದ್ದು!

ರಶ್ಮಿಕಾ ಮಂದಣ್ಣ
ಬೆಂಗಳೂರು , ಶನಿವಾರ, 30 ಡಿಸೆಂಬರ್ 2017 (09:37 IST)
ಬೆಂಗಳೂರು: ಭಾವೀ ಮಡದಿ ರಶ್ಮಿಕಾ ಅಭಿನಯದ ಚಮಕ್ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ರಶ್ಮಿಕಾ ಜತೆಗೆ ಗೋಲ್ಡನ್ ಸ್ಟಾರ್ ಗಣೇಶ್ ರನ್ನೂ ಹೊಗಳಿದ್ದಾರೆ.
 

ತಮ್ಮ ಟ್ವಿಟರ್ ಪೇಜ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ‘ಇದೊಂದು ಅದ್ಭುತ ಕೌಟುಂಬಿಕ ಮನರಂಜನೆ ಚಿತ್ರವಾಗುವುದರಲ್ಲಿ ಸಂಶಯವಿಲ್ಲ. ಗಣೇಶ್ ಸರ್ ಅಭಿನಯ ಅತ್ಯದ್ಭುತ. ರಶ್ಮಿಕಾ ಅದ್ಭುತವಾಗಿ ಕಾಣಿಸುತ್ತಿದ್ದಾಳೆ ಮತ್ತು ಅವಳ ಅಭಿನಯವನ್ನು ನೋಡಲೇಬೇಕು’ ಎಂದು ರಕ್ಷಿತ್ ಹೊಗಳಿದ್ದಾರೆ.

ಅಂಜನಿ ಪುತ್ರದ ನಂತರ ರಶ್ಮಿಕಾ ಅಭಿನಯಿಸಿರುವ ಚಮಕ್ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ. ಹೀಗಾಗಿ ರಶ್ಮಿಕಾಗೆ ಡಿಸೆಂಬರ್ ತಿಂಗಳು ಮಹತ್ವದ್ದಾಗಿದೆ. ಅದರಲ್ಲೂ ಭಾವೀ ಪತಿಯಿಂದಲೇ ಇಷ್ಟೆಲ್ಲಾ ಹೊಗಳಿಕೆ ಸಿಕ್ಕ ಮೇಲೆ ಕೇಳಬೇಕೇ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹೊಸವರ್ಷವನ್ನು ಎಲ್ಲಿ ಆಚರಿಸಲಿದ್ದಾರೆ ಗೊತ್ತಾ…?