Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ಹೊಸ ಸಿನಿಮಾಗೆ ಅನಂತ್ ನಾಗ್ ಹೀರೋ

ರಕ್ಷಿತ್ ಶೆಟ್ಟಿ ಹೊಸ ಸಿನಿಮಾಗೆ ಅನಂತ್ ನಾಗ್ ಹೀರೋ
ಬೆಂಗಳೂರು , ಮಂಗಳವಾರ, 24 ಆಗಸ್ಟ್ 2021 (09:34 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಹೋಂ ಬ್ಯಾನರ್ ನಲ್ಲಿ ಹೊಸ ಸಿನಿಮಾ ಘೋಷಿಸಿದ್ದು, ಈ ಸಿನಿಮಾಗೆ ಹಿರಿಯ ನಟ ಅನಂತ್ ನಾಗ್ ನಾಯಕರಾಗಿದ್ದಾರೆ.


ರಕ್ಷಿತ್ ತಮ್ಮ ಪರಂವಾ ಸ್ಟುಡಿಯೋ ನಿರ್ಮಾಣ ಸಂಸ್ಥೆಯಡಿಯಲ್ಲಿ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ‘ಅಬ್ರಕಡಾಬ್ರ’ ಎಂದು ಟೈಟಲ್ ಫಿಕ್ಸ್ ಆಗಿದೆ. ರಕ್ಷಿತ್ ಜೊತೆಗೆ ಜಿ.ಎಸ್. ಗುಪ್ತಾ ಕೂಡಾ ಬಂಡವಾಳ ಹೂಡಿದ್ದಾರೆ.

ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಅನಂತ್ ನಾಗ್ ಅವರದ್ದಾದರೆ, ಅವರ ಜೊತೆಗೆ ಸಿರಿ ರವಿಕುಮಾರ್, ಅವಿನಾಶ್ ರೈ ಮುಂತಾದವರು ಪಾತ್ರ ಮಾಡಲಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಸಿನಿಮಾ ಎನ್ನಲಾಗಿದೆ. ಇದೀಗ ಚಿತ್ರದ ಟೈಟಲ್ ಪೋಸ್ಟರ್ ಮಾತ್ರ ಬಿಡುಗಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮದುವೆ ಸಂಭ್ರಮದಲ್ಲಿ ಕಿಚ್ಚ ಸುದೀಪ್