Select Your Language

Notifications

webdunia
webdunia
webdunia
webdunia

2021 ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್ ಶೆಟ್ಟಿ ಬೆಸ್ಟ್ ಆಕ್ಟರ್

Rakshith Shetty

Krishnaveni K

ಬೆಂಗಳೂರು , ಶುಕ್ರವಾರ, 3 ಅಕ್ಟೋಬರ್ 2025 (21:40 IST)
ಬೆಂಗಳೂರು: 2021 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಉಳಿದಂತೆ ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ ನೋಡಿ.

777 ಚಾರ್ಲಿ ಸಿನಿಮಾದ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮ್ಯೂಟ್ ಸಿನಿಮಾಗಾಗಿ ಅರ್ಚನಾ ಜೋಯಿಸ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದಾರೆ. ಕೆಎಂ ರಘು ನಿರ್ದೇಶನದ ದೊಡ್ಡ ಹಟ್ಟಿ ಬೋರೆ ಗೌಡ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ.

ಉಳಿದಂತೆ ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ.

ಅತ್ಯುತ್ತಮ ನಟ-ರಕ್ಷಿತ್ ಶೆಟ್ಟಿ
ಅತ್ಯುತ್ತಮ ನಟಿ: ಅರ್ಚನಾ ಜೋಯಿಸ್
ಅತ್ತುತ್ತಮ ಸಿನಿಮಾ: ದೊಡ್ಡಹಟ್ಟಿ ಬೋರೇಗೌಡ
ಅತ್ಯುತ್ತಮ ಚೊಚ್ಚಲ ನಿರ್ದೇಶನ: ಶಂಕರ್ ಗುರು (ಬಡವ ರಾಸ್ಕಲ್)
ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ: ಭಾರತದ ಪ್ರಜೆಗಳಾದ ನಾವು
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಯುವರತ್ನ
ಅತ್ಯುತ್ತಮ ಮಕ್ಕಳ ಚಿತ್ರ: ಕೇಕ್
ಅತ್ಯುತ್ತಮ ಪೋಷಕ ನಟ: ಪ್ರಮೋದ್ (ರತ್ನನ್ ಪ್ರಪಂಚ)
ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ(ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ: ಇಮ್ತಿಯಾಜ್ (ಬಿಸಿಲು ಕುದುರೆ)
ಬಾಲನಟ: ಮಾಸ್ಟರ್ ಅತೀಶ್ ಶೆಟ್ಟಿ (ಕೇಕ್)
ಅತ್ಯುತ್ತಮ ಬಾಲನಟಿ: ಬೇಬಿ ಭೈರವಿ
ಅತ್ಯುತ್ತಮ ಪ್ರಾದೇಶಿಕ ಸಿನಿಮಾ: ನಾಡ ಪೆದಾ ಆಶಾ
ಅತ್ಯುತ್ತಮ ಹಿನ್ನಲೆ ಗಾಯಕಿ: ಸಹನಾ ಎಂ ಭಾರದ್ವಾಜ್
ಅತ್ಯುತ್ತಮ ಹಿನ್ನಲೆ ಗಾಯಕ: ಅನೀಶ್ ಕೇಶವ ರಾವ್
ಅತ್ಯುತ್ತಮ ಕಲಾನಿರ್ದೇಶನ: ರವಿ ಸಂತೇಹಕ್ಲು

Share this Story:

Follow Webdunia kannada

ಮುಂದಿನ ಸುದ್ದಿ

ಅದ್ಧೂರಿ ಬರ್ತಡೇ ಸೆಲೆಬ್ರೇಶನ್ ಹಿಂದಿದೆಯಾ ರಾಜಕೀಯ ಎಂಟ್ರಿ, ಡಿಂಪಲ್ ಕ್ವೀನ್ ರಚಿತಾ ಏನಂದ್ರು ಗೊತ್ತಾ