Select Your Language

Notifications

webdunia
webdunia
webdunia
webdunia

ನನ್ನ ಮಗಳ ಜಾಗರೂಕತೆ ದೊಡ್ಡ ಅವಘಡ ತಪ್ಪಿಸಿತು: ಅಕ್ಷಯ್ ಕುಮಾರ್‌

Actor Akshay Kumar Daughter

Sampriya

ಮುಂಬೈ, , ಶುಕ್ರವಾರ, 3 ಅಕ್ಟೋಬರ್ 2025 (16:38 IST)
Photo Credit X
ಮುಂಬೈ,: ತನ್ನ ಮಗಳು ಆನ್‌ಲೈನ್‌ನಲ್ಲಿ ವಿಡಿಯೋ ಗೇಮ್‌ ಆಡುವಾಗ  ನಗ್ನ ಫೋಟೋ ಕಳುಹಿಸಲು ದುಷ್ಕರ್ಮಿಯೊಬ್ಬ  ಕೇಳಿರುವ ವಿಚಾರವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ. 

ಈ ರೀತಿ ಸಂದೇಶ ಬಂದಾಗ ತಕ್ಷಣವೇ ನನ್ನ ಮಗಳು ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದಾಳೆ ಎಂದು ಹೇಳಿದರು. 

ಮುಂಬೈನಲ್ಲಿ ನಡೆದ ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ಒಳಗೊಂಡಂತೆ ಸೇರಿದ್ದ ಜನರ ಮುಂದೆಯೇ ನಟ ಈ ಆತಂಕಕಾರಿ ಘಟನೆಯನ್ನು ನಟ ಹಂಚಿಕೊಂಡಿದ್ದಾರೆ. 

ಕೆಲವು ತಿಂಗಳ ಹಿಂದೆ ನನ್ನ ಮಗಳು ಆನ್‌ಲೈನ್ ವಿಡಿಯೊ ಗೇಮ್ ಆಡುತ್ತಿದ್ದಾಗ, ಆರಂಭದಲ್ಲಿ ಸ್ನೇಹಪರ ಮತ್ತು ಪ್ರೋತ್ಸಾಹದಾಯಕ ಸಂದೇಶಗಳನ್ನು ಕಳುಹಿಸಿದ್ದ ವ್ಯಕ್ತಿಯೊಬ್ಬ ನಗ್ನ ಫೋಟೋವನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾಣೆ. 

ತನ್ನ ಮಗಳ ಜಾಗರೂಕತೆಯು ಸೈಬರ್ ಅಪರಾಧಿಗಳಿಗೆ ಬಲಿಯಾಗುವುದನ್ನು ತಡೆಯಿತು ಎಂದು ನಟ ಹೇಳಿದ್ದಾರೆ.

ದಕ್ಷಿಣ ಮುಂಬೈನಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೈಬರ್ ಜಾಗೃತಿ ಮಾಸದ ಉದ್ಘಾಟನೆಯ ನಂತರ ಮಾತನಾಡಿದ ನಟ, ರಾಜ್ಯದ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಶಾಲೆಗಳಲ್ಲಿ ಸೈಬರ್ ಜಾಗೃತಿಯನ್ನು ಮೂಡಿಸಬೇಕು ಎಂದು ಮುಖ್ಯಮಂತ್ರಿ ಫಡಣವೀಸ್ ಅವರಿಗೆ ಮನವಿ ಮಾಡಿದರು.

ತಮ್ಮ ಮಗಳು ಆನ್‌ಲೈನ್ ಗೇಮ್ ಆಡುತ್ತಿದ್ದಾಗ ಆಕೆಯನ್ನು ಪರಿಚಯ ಮಾಡಿಕೊಂಡು, ಆಕೆಯ ಮೂಲ, ಹೆಣ್ಣೋ ಗಂಡೋ ಎಂಬೆಲ್ಲ ಮಾಹಿತಿ ಪಡೆದು ಬಳಿಕ ನಗ್ನ ಚಿತ್ರ ಕಳುಹಿಸುವಂತೆ ಕೇಳಿದ್ದ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರಾ ಅಧ್ಯಾಯ 1 ನೋಡಿ ನಟ ರಿಷಭ್ ಶೆಟ್ಟಿ ಬಗ್ಗೆ ಪದಗಳಲ್ಲಿ ವರ್ಣಿಸಿದ ನಟ ಯಶ್‌