ನಟ ರಕ್ಷಿತ್ ಶೆಟ್ಟಿ ಅಪರೂಪಕ್ಕೆ ಜನರ ಮುಂದೆ ಬಂದಿದ್ದಾರೆ. ಕಳೆದ ಕೆಲವು ದಿನಗಳಿಂದ ರಕ್ಷಿತ್ ಶೆಟ್ಟಿ ನಾಪತ್ತೆಯಾಗಿದ್ದಾರೆ ಎಂದವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಅಮೆರಿಕಾದ ನಾವಿಕ ಉತ್ಸವದಲ್ಲಿ ಅವರು ಆಡಿದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಪ್ತಸಾಗರದಾಚೆ ಎಲ್ಲೊ 2 ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಇದುವರೆಗೆ ಅವರ ಕಡೆಯಿಂದ ಯಾವುದೇ ಅಪ್ ಡೇಟ್ ಇಲ್ಲ. ಹೀಗಾಗಿ ಮೊನ್ನೆ ಅವರ ಹುಟ್ಟುಹಬ್ಬದಂದೂ ಕೆಲವರು ರಕ್ಷಿತ್ ನಾಪತ್ತೆಯಾಗಿದ್ದಾರೆ ಎಂದು ಟ್ರೋಲ್ ಮಾಡಿದ್ದರು.
ಅದಲ್ಲದೆ ಆಗಾಗ ಪತ್ರಿಕಾಗೋಷ್ಠಿಗೆ ಬಂದು ಮಾತಿನ ಮನೆ ಕಟ್ಟುವುದು ಅವರ ಅಭ್ಯಾಸವಲ್ಲ. ಈಗ ಅಮೆರಿಕಾದ ನಾವಿಕ ಉತ್ಸವದಲ್ಲಿ ರಕ್ಷಿತ್ ಶೆಟ್ಟಿ ಅತಿಥಿಯಾಗಿ ಭಾಗಿಯಾಗಿದ್ದು ಅದ್ಭುತವಾಗಿ ಮಾತನಾಡಿದ್ದಾರೆ.
ನಾನು ಸ್ವಲ್ಪ ಸ್ಲೋ ಎಂದು ಎಲ್ಲರಿಗೂ ಅನಿಸಬಹುದು. ಆದರೆ ನಾನು ನನ್ನ ಪರಂವಾ ಸ್ಟುಡಿಯೋಸ್ ತಂಡ ಆ ಪ್ರಯತ್ನದಲ್ಲೇ ಇದ್ದೀವಿ. ಕೆಲವೊಮ್ಮೆ ದೊಡ್ಡ ಕೆಲಸ ಮಾಡುವಾಗ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. ಅದಕ್ಕೋಸ್ಕರ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಆದರೆ ನಾನು ಬಂದಾಗ ಡಿಫರೆಂಟ್ಲೀ ನೀವೆಲ್ಲರೂ ಥಿಯೇಟರ್ ಗೆ ಹೋಗದೇ ಇರುವವರೂ ಥಿಯೇಟರ್ ಗೆ ಬರುವ ಹಾಗೆ ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಅವರ ಮಾತಿಗೆ ಸಾಕಷ್ಟು ಶಿಳ್ಳೆ, ಚಪ್ಪಾಳೆಗಳು ಬಿದ್ದಿವೆ.
Shettree???????????? @rakshitshetty Hyped again! pic.twitter.com/nGGCtHp2xv
— Dynamic✨ (@raghuheree) September 3, 2025