ಚೆನ್ನೈ: ತಲೈವಾ, ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಟ ರಜನೀಕಾಂತ್ ಗೆ ಇಂದು 71 ನೇ ಜನ್ಮದಿನದ ಸಂಭ್ರಮ.
ಹೀಗಾಗಿ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ತಮ್ಮ ಆಪ್ತರು, ಕುಟುಂಬಸ್ಥರೊಂದಿಗೆ ರಜನಿ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಲಿದ್ದಾರೆ.
ಅವರ ಆರೋಗ್ಯದ ಪರಿಸ್ಥಿತಿಯಿಂದಾಗಿ ಈ ಬಾರಿ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆಯಾಗುವ ಸಾಧ‍್ಯತೆ ಕಡಿಮೆ. ಆದರೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮದೇ ಪೋಸ್ಟರ್, ವಿಡಿಯೋಗಳನ್ನು ಲಾಂಚ್ ಮಾಡಿ ತಲೈವಾಗೆ ಶುಭ ಹಾರೈಸುತ್ತಿದ್ದಾರೆ.