Select Your Language

Notifications

webdunia
webdunia
webdunia
webdunia

ಸೂಪರ್ ಸ್ಟಾರ್ ರಜನೀಕಾಂತ್ ರನ್ನೂ ಬಿಟ್ಟಿಲ್ಲ ಈ ಭೂತ!

webdunia
ಗುರುವಾರ, 9 ಜನವರಿ 2020 (16:01 IST)
ಚೆನ್ನೈ: ಇತ್ತೀಚೆಗೆ ಯಾವುದೇ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಯಾದರೂ ಸ್ಟಾರ್ ಗಳಿಗೆ ಎಲ್ಲಕ್ಕಿಂತ ಹೆಚ್ಚು ಭಯ ಹುಟ್ಟಿಸುತ್ತಿರುವುದು ಆನ್ ಲೈನ್ ಪೈರಸಿಕೋರರದ್ದು. ಅದೀಗ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ದರ್ಬಾರ್ ನ್ನೂ ಬಿಟ್ಟಿಲ್ಲ.


ದರ್ಬಾರ್ ಸಿನಿಮಾ ಇಂದು ಭರ್ಜರಿಯಾಗಿ ದೇಶಾದ್ಯಂತ ತೆರೆ ಕಂಡಿದೆ. ಆದರೆ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ತಮಿಳು ರಾಕರ್ಸ್ ವೆಬ್ ಪೋರ್ಟಲ್ ಪೈರಸಿ ವಿಡಿಯೋ ಲೀಕ್ ಮಾಡಿದೆ. ಪೂರ್ತಿ ಸಿನಿಮಾ ಈ ವೆಬ್ ನಲ್ಲಿ ಲೀಕ್ ಆಗಿದೆ.

ಮೊನ್ನೆಯಷ್ಟೇ ಅವನೇ ಶ್ರೀಮನ್ನಾರಾಯಣ ಸಿನಿಮಾ ಕೂಡಾ ಇದೇ ಪೋರ್ಟಲ್ ನಲ್ಲಿ ಲೀಕ್ ಆಗಿತ್ತು. ಇದರಿಂದಾಗಿ ಸಿನಿಮಾ ನಿರ್ಮಾಪಕರು ನಿದ್ರೆಗೆಡುವಂತಾಗಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಕನ್ನಡದಲ್ಲಿ ರಿಲೀಸ್ ಆಗದ ಹಿನ್ನಲೆ; ದರ್ಬಾರ್ ಚಿತ್ರಕ್ಕೆ ಕನ್ನಡ ಪರ ಸಂಘಟನೆಗಳಿಂದ ವಿರೋಧ