Webdunia - Bharat's app for daily news and videos

Install App

ಬಿಡುಗಡೆಗೂ ಮುನ್ನ ದಾಖಲೆಗಳನ್ನು ಮುರಿಯಲು ಪ್ರಾರಂಭಿಸಿದ ರಾಜಮೌಳಿ ಆರ್ ಆರ್ ಆರ್ ಚಿತ್ರ

Webdunia
ಮಂಗಳವಾರ, 6 ಏಪ್ರಿಲ್ 2021 (11:46 IST)
ಹೈದರಾಬಾದ್ : ರಾಜಮೌಳಿ ನಿರ್ದೆಶನದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಅಭಿನಯದ ‘ಆರ್ ಆರ್ ಆರ್’ ಚಿತ್ರ ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರ ಈಗಾಗಲೇ 900ಕೋಟಿ ರೂ ಸಂಗ್ರಹಿಸುವುದರ ಮೂಲಕ ಬಿಡುಗಡೆಗೂ ಮುನ್ನ ದಾಖಲೆಗಳನ್ನು ಮುರಿಯಲು ಪ್ರಾರಂಭಿಸಿದೆ ಎನ್ನಲಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ ‘ಆರ್ ಆರ್ ಆರ್’ ಚಿತ್ರದ ವಿಶ್ವದಾದ್ಯಂತ ಥಿಯೇಟರ್ ಹಕ್ಕುಗಳನ್ನು 570 ಕೋಟಿ ರೂಗೆ ಮಾರಾಠ ಮಾಡಲಾಗಿದೆ. ಡಿಜಿಟಲ್ ಮತ್ತು ಸೆಟಲೈಟ್ ಹಕ್ಕುಗಳನ್ನು 300ಕೋಟಿ ರೂ.ಗೆ ಮತ್ತು ಸಂಗೀತ ಹಕ್ಕುಗಳನ್ನು 20ಕೋಟಿ ರೂ,ಗೆ ಮಾರಾಟ ಮಾಡಲಾಗಿದ್ದರೆ, ಆಂಧ್ರ ಮತ್ತು ನಿಜಾಮ್ ಥಿಯೇಟರ್ ಹಕ್ಕುಗಳು ಒಟ್ಟಾಗಿ 240ಕೋಟಿ ರೂ. ಗಳಾಗಿದೆ.

ಹಾಗೇ ಈ ಚಿತ್ರದ ಹಿಂದಿ  ಥಿಯೇಟರ್ ಹಕ್ಕುಗಳನ್ನು 140 ಕೋಟಿ ರೂ,ಗೆ, ತಮಿಳು ನಾಡಿನ ಹಕ್ಕುಗಳನ್ನು 48ಕೋಟಿ ರೂ.ಗೆ, ಕರ್ನಾಟಕದ ಹಕ್ಕುಗಳನ್ನು 45 ಕೋಟಿ ರೂ.ಗೆ, ಕೇರಳದ ಹಕ್ಕುಗಳನ್ನು 15 ಕೋಟಿ ರೂ.ಗೆ ಸೇರಿದಂತೆ ಎಲ್ಕಾ ಭಾಷೆಗಳ ಹಕ್ಕುಗಳನ್ನು 70ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಒಟ್ಟಾರೆ ಚಿತ್ರ 900ಕೋಟಿ ರೂ, ಸಂಗ್ರಹಿಸಿದ್ದು, ಈ ಚಿತ್ರದ ಬಜೆಟ್ 400ಕೋಟಿ ರೂ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments