ನಟ ನಾಗಚೈತನ್ಯ ಅವರಿಂದ ದೂರವಾದ ಬಳಿಕ ನಟಿ ಸಮಂತಾ ರುತ್ ಪ್ರಭು ಅವರ ಹೆಸರು ಬಿಎಫ್ ರಾಜ್ ನಿಡಿಮೋರು ಅವರ ಜತೆ ತಳುಕುಹಾಕಿಕೊಂಡಿದೆ. ಇವರಿಬ್ಬರು ಒಟ್ಟಿಗೆ ಆತ್ಮೀಯವಾಗಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿವೆ. ಇಬ್ಬರು ಡೇಟಿಂಗ್‌ನಲ್ಲಿದ್ದಾರೆಂಬ ಸುದ್ದಿಯೂ ಇದೆ.
ಇದೀಗ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.
2015ರಲ್ಲಿ ರಾಜ್ ನಿಡಿಮೋರು ಅವರು ಶ್ಯಾಮಲಿ ದೇ ಅವರನ್ನು ವಿವಾಹವಾದರು. ದಂಪತಿ ವಿಚ್ಛೇಧನ ಪಡೆದು ದೂರವಾದರು.
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರ ವದಂತಿಯ ಸಂಬಂಧದ ಬಗ್ಗೆ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಬೆನ್ನಲ್ಲೇ ಶ್ಯಾಮಲಿ ಡಿ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಸ್ಟೋರಿ ಎಲ್ಲರ ಗಮನ ಸೆಳೆದಿದೆ. ನಂಬಿಕೆಯ ಕುರಿತು ಪೋಸ್ಟ್ ಅನ್ನು ಶ್ಯಾಮಲಿ ಡಿ ತಮ್ಮ Instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ನಂಬಿಕೆ ಅತ್ಯಂತ ದುಬಾರಿಯಾದ ಕರೆನ್ಸಿ ಎಂದು ಬರೆದುಕೊಂಡಿದ್ದಾರೆ.
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರ ಡೇಟಿಂಗ್ ಬಜ್ ಆವೇಗವನ್ನು ಪಡೆದಾಗಿನಿಂದ ಅವರ ಪೋಸ್ಟ್ ಇದೀಗ ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.