ಬೆಂಗಳೂರು: ನಿನ್ನೆ ಬಿಡುಗಡೆಯಾದ ಸು ಫ್ರಮ್ ಸೋ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸ್ಟಾರ್ ಗಳಿಲ್ಲದಿದ್ದರೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುವತ್ತ ಸಾಗಿದೆ. ಈ ನಡುವೆ ಶೋ ಕಡಿಮೆಯಾಯ್ತು ಎನ್ನುವ ಆಕ್ಷೇಪಗಳಿಗೆ ನಿರ್ಮಾಪಕ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ?
ಪಕ್ಕಾ ಕರಾವಳಿ ಕನ್ನಡಿಗರೇ ಅಭಿನಯಿಸಿದ ಕರಾವಳಿ ಕನ್ನಡ ಭಾಷೆಯ ಕಾಮಿಡಿ, ಹಾರರ್ ಸಿನಿಮಾ ಸು ಫ್ರಮ್ ಸೋ ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವೀಕೆಂಡ್ ನಲ್ಲಿ ಚಿತ್ರ ವೀಕ್ಷಕರ ಸಂಖ್ಯೆ ಹೆಚ್ಚಾಗಲಿದೆ. ಈಗಾಗಲೇ ಬುಕಿಂಗ್ ನಲ್ಲೂ ಪವನ್ ಕಲ್ಯಾಣ್ ಸಿನಿಮಾವನ್ನೂ ಮೀರಿಸಿದೆ.
ಬುಕ್ ಮೈ ಶೋನಲ್ಲಿ ಸಿನಿಮಾಗೆ 9.7 ರೇಟಿಂಗ್ ಸಿಕ್ಕಿದ್ದು ಫ್ಯಾಮಿಲಿ ಸಮೇತ ಚಿತ್ರ ನೋಡಲು ಬುಕಿಂಗ್ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾ ಹೆಚ್ಚು ಥಿಯೇಟರ್ ನಲ್ಲಿ ಬಿಡುಗಡೆ ಮಾಡಿಲ್ಲ ಎಂಬ ಬೇಸರ ಪ್ರೇಕ್ಷಕರಲ್ಲಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಾಜ್ ಬಿ ಶೆಟ್ಟಿಗೆ ಪ್ರೇಕ್ಷಕರು ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ ಬಿ ಶೆಟ್ಟಿ, ಜನರ ಪ್ರತಿಕ್ರಿಯೆ ನೋಡಿಕೊಂಡು ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್ ಮಾಡೋಣ ಎಂದು ಅಂದುಕೊಂಡಿದ್ದೆವು. ಸ್ಟಾರ್ ಗಳಿಲ್ಲದ ಸಿನಿಮಾ ಆದ ಕಾರಣ ಸೀದಾ ಹೆಚ್ಚು ಥಿಯೇಟರ್ ಗಳ ಸಂಖ್ಯೆ ಹೆಚ್ಚಿಸುವ ಬದಲು ಜನರ ಅಭಿಪ್ರಾಯ ನೋಡಿಕೊಂಡು ಹೆಚ್ಚು ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.