Select Your Language

Notifications

webdunia
webdunia
webdunia
webdunia

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯ ‘ಲಾ’ ಪಾಯಿಂಟ್ ಕುತೂಹಲ ಹುಟ್ಟಿಸುವಂತಿದೆ!

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯ ‘ಲಾ’ ಪಾಯಿಂಟ್ ಕುತೂಹಲ ಹುಟ್ಟಿಸುವಂತಿದೆ!
ಬೆಂಗಳೂರು , ಶನಿವಾರ, 11 ಜುಲೈ 2020 (09:31 IST)
ಬೆಂಗಳೂರು: ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಇದೇ ಮೊದಲ ಬಾರಿಗೆ ಹಿರಿತೆರೆಯಲ್ಲಿ ಪೂರ್ಣಪ್ರಮಾಣದಲ್ಲಿ ನಾಯಕಿಯಾಗಿ ನಟಿಸಿರುವ ಸಿನಿಮಾ ‘ಲಾ’. ಈ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು, ಜುಲೈ 17 ರಂದು ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.


ಲಾಕ್ ಡೌನ್ ನಿಂದಾಗಿ ಚಿತ್ರ ಸಿನಿಮಾ ಮಂದಿರಗಳಲ್ಲಿ ತೆರೆ ಕಾಣುತ್ತಿಲ್ಲ. ಹಾಗಿದ್ದರೂ ಟ್ರೈಲರ್ ನೋಡಿದ ಪ್ರೇಕ್ಷಕರು ಈ ಥ್ರಿಲ್ಲರ್ ಸಿನಿಮಾ ನೋಡುವುದಕ್ಕೆ ಕಾತುರವಾಗಿದ್ದಾರೆ.

ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾದ ಅಶ್ವನಿ ಪುನೀತ್ ರಾಜಕುಮಾರ್ ನಿರ್ಮಾಣದ ಸಿನಿಮಾ ಇದಾಗಿದೆ. ರಾಗಿಣಿ ಜತೆಗೆ ಅವಿನಾಶ್, ಅಚ್ಯುತ್ ರಾವ್ ಮುಂತಾದ ಪ್ರತಿಭಾವಂತರ ತಾರಾಬಳಗವೇ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಆಪ್, ಚಾನೆಲ್ ಶುರು ಮಾಡಿಕೊಂಡ ಕನ್ನಡ ಕಿರುತೆರೆ ನಟಿಯರು