Publish Date: Sat, 05 Sep 2020 (12:23 IST)
Updated Date: Sat, 05 Sep 2020 (12:25 IST)
ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಮನೆಯಲ್ಲಿ ಸಿಕ್ಕ ಸಿಗರೇಟ್ ಪ್ಯಾಕ್ ನಲ್ಲಿ ಮಾದಕ ದ್ರವ್ಯ ಅಂಶವಿದೆಯೇ ಎಂದು ಪತ್ತೆ ಮಾಡಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಒಂದು ವೇಳೆ ಇದರಲ್ಲಿ ಮಾದಕ ದ್ರವ್ಯ ಅಂಶ ಪತ್ತೆಯಾದರೆ ರಾಗಿಣಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅವರ ಮೇಲಿನ ಡ್ರಗ್ ಆರೋಪ ಮತ್ತಷ್ಟು ಬಿಗಿಯಾಗಲಿದೆ. ನಿನ್ನೆ ತಮ್ಮ ಪ್ರಶ್ನೆಗಳಿಗೆ ಸರಿಯಾಗಿ ಸ್ಪಂದಿಸದ ರಾಗಿಣಿಯನ್ನು ಇಂದು ಸಿಸಿಬಿ ಮತ್ತಷ್ಟು ವಿಚಾರಣೆಗೊಳಪಡಿಸುತ್ತಿದೆ.