Webdunia - Bharat's app for daily news and videos

Install App

ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಪುನೀತ್ ಗೆ ವಿಶೇಷ ಗೌರವ

Webdunia
ಶುಕ್ರವಾರ, 28 ಏಪ್ರಿಲ್ 2023 (07:00 IST)
Photo Courtesy: Twitter
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ನವರಸನಾಯಕ ಜಗ್ಗೇಶ್ ನಾಯಕರಾಗಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಇಂದಿನಿಂದ ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ.

ಈ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ವಿಶೇಷವೆಂದರೆ ಚಿತ್ರತಂಡ ಸಿನಿಮಾ ಆರಂಭದಲ್ಲೇ ಪುನೀತ್ ರಾಜ್ ಕುಮಾರ್ ಗೆ ವಿಶೇಷ ಗೌರವ ಸಲ್ಲಿಸಿದೆ. ‘ನಿಮ್ಮ ಬದುಕು ನಮಗೆ ಮಾದರಿ. ಈ ಚಿತ್ರ ನಿಮಗೆ ಅರ್ಪಣೆ’ ಎಂದು ಪುನೀತ್ ಫೋಟೋ ಸಮೇತ ಗೌರವ ನೀಡಿದೆ.

ಬಳಿಕ ಪುನೀತ್ ಸಮಾಜಸೇವೆಯ ಬಗ್ಗೆ ಗುಣಗಾನ ಮಾಡಿ ಎರಡು ಸಾಲುಗಳನ್ನು ಹಾಕಲಾಗಿದೆ. ‘ನಾವು ಇನ್ನೊಬ್ಬರಿಗೆ ಮಾಡೋ ಸಹಾಯ ನಮಗೆ ಹಿರಿಮೆ ಆಗಿದ್ದರೂ ಸಹಾಯ ಪಡೆದವರಿಗೆ ಕೀಳರಿಮೆ ಆಗಬಾರದು. ನಮ್ಮ ಸೇವೆ ಪರರಿಗೆ ತಿಳಿಸಿ ಮಾಡಿದರೆ ಪ್ರಚಾರ. ತಿಳಿಯದ ಹಾಗೆ ಮಾಡಿದರೆ ವಿಚಾರ ಏನೂ ಬಯಸದೆ ಆತ್ಮತೃಪ್ತಿಗೆ ಸೇವೆ ಮಾಡುವವನು ಪರಮಾತ್ಮನಿಗೆ ಹತ್ತಿರವಾಗುತ್ತಾನೆ, ‘ಪರಮಾತ್ಮನಾಗುತ್ತಾನೆ’ ಎಂಬ ಸಾಲುಗಳನ್ನು ಹಾಕಿ ಅಗಲಿದ ಪ್ರೀತಿಯ ಅಪ್ಪುಗೆ ಹೊಂಬಾಳೆ ಫಿಲಂಸ್ ಗೌರವ ಸಲ್ಲಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

ಮುಂದಿನ ಸುದ್ದಿ
Show comments