Select Your Language

Notifications

webdunia
webdunia
webdunia
Sunday, 6 April 2025
webdunia

ಪತ್ನಿ ಪರಿಣಿತಿ ಚೋಪ್ರಾ ಮಧುರ ಕಂಠ ಸಿರಿಗೆ ಮನಸೋತ ರಾಘವ್ ಚಡ್ಡಾ

Parineeti Chopra Singing

Sampriya

ಮುಂಬೈ , ಶುಕ್ರವಾರ, 30 ಆಗಸ್ಟ್ 2024 (16:07 IST)
Photo Courtesy X
ಮುಂಬೈ: ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಪರಿಣಿತಿ ಚೋಪ್ರಾ ಅವರ ಗಾಯನಕ್ಕೆ ಪತ್ನಿ ರಾಘವ್ ಚಡ್ಡಾ ಮನಸೋತಿದ್ದಾರೆ.

ಆಮ್‌ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರನ್ನು ಪ್ರೀತಿಸುತ್ತಿದ್ದ ಪರಿಣಿತಿ ಚೋಪ್ರಾ ಅವರು 2023ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಆಗಾಗ ತಮ್ಮ ಪ್ರೀತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾ ವ್ಯಕ್ತಪಡಿಸುತ್ತಾರೆ.

ಇದೀಗ ರಾಘವ್ ಚಡ್ಡಾ ಅವರು ಪತ್ನಿ ಗಾಯಗ ಕೇಳಿ ರೋಮಾಂಚನಗೋಮಡಿರುವುದಾಗಿ ಹೇಳಿಕೊಂಡಿದ್ದಾರೆ.  ರಾಘವ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪತ್ನಿ ಪರಿಣಿತ ಅವರ ಥ್ರೋಬ್ಯಾಕ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ಅವರು ತಮ್ಮ ಕಿಲ್ ದಿಲ್ ಚಿತ್ರದ "ಸಜ್ದೆ" ಹಾಡನ್ನು ಸುಂದರವಾಗಿ ಹಾಡುತ್ತಿದ್ದಾರೆ, ಇದರಲ್ಲಿ ರಣವೀರ್ ಸಿಂಗ್ ಸಹ ನಟಿಸಿದ್ದಾರೆ.

ಈ ವಿಡಿಯೋ ರಾಘವ್‌ಗೆ ವಿಸ್ಮಯವನ್ನುಂಟು ಮಾಡಿತು, ಅವಳ ಹಾಡುಗಾರಿಕೆ ತನಗೆ ಗೂಸ್‌ಬಂಪ್ಸ್ ನೀಡಿತು ಎಂದು ಅವರು ಬರೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಇಂದು ಫೇವರೆಟ್ ಊಟ