Webdunia - Bharat's app for daily news and videos

Install App

ಕೆಜಿಎಫ್ ರಿಲೀಸ್ ಆದ ಬೆನ್ನಲ್ಲೇ ಪತಿ ಯಶ್ ಗೆ ರಾಧಿಕಾ ಪಂಡಿತ್ ಕೊಟ್ಟ ಆ ಸ್ವೀಟ್ ಮೆಸೇಜ್ ಏನು ಗೊತ್ತಾ?!

Webdunia
ಶುಕ್ರವಾರ, 21 ಡಿಸೆಂಬರ್ 2018 (09:59 IST)
ಬೆಂಗಳೂರು: ಹಾಗೂ ಹೀಗೂ ಕೊನೆಗೂ ಇಂದು ಕೆಜಿಎಫ್ ಬಿಡುಗಡೆಯಾಗಿದ್ದು, ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಅಭಿಮಾನಿಗಳು ಇಷ್ಟೆಲ್ಲಾ ಹಾರೈಸುತ್ತಿರುವಾಗ ನಾಯಕ ರಾಕಿಂಗ್ ಸ್ಟಾರ್ ಯಶ್ ಮಡದಿ ರಾಧಿಕಾ ಪಂಡಿತ್ ಸುಮ್ಮನಿರುತ್ತಾರಾ?


ಪತಿ ಯಶ್ ಯಶಸ್ಸಿಗೆ ರಾಧಿಕಾ ಪಂಡಿತ್ ಪ್ರೀತಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ, ಪ್ರೀತಿಯಿಂದ ಸ್ಪೆಷಲ್ ಸಂದೇಶ ಬರೆದಿದ್ದಾರೆ.

‘ಕೆಜಿಎಫ್ ನ ಸಮಸ್ತ ತಂಡಕ್ಕೆ ನನ್ನ ಅಭಿನಂದನೆಗಳು. ಅವರ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಫಲ ಸಿಗಲಿ ಎಂದು ಹಾರೈಸುತ್ತೇನೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಸೀಮೆಯೇ ಇಲ್ಲದಾಗಲಿ. ಅದರಲ್ಲೂ ಈ ಸಿನಿಮಾದ ನಾಯಕನಿಗೆ ಒಂಚೂರು ಹೆಚ್ಚೇ ಶುಭ ಹಾರೈಸುತ್ತೇನೆ. ಯಾಕೆಂದರೆ ಅವರು ಕಠಿಣ ಪರಿಶ್ರಮಪಡುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅವರಿಗೆ ಮತ್ತಷ್ಟು ಖುಷಿ ಸಿಗಲಿ ಎಂದು ಹಾರೈಸುತ್ತೇನೆ’ ಎಂದು ರಾಧಿಕಾ ಯಶ್ ಮತ್ತು ಕೆಜಿಎಫ್ ಟೀಂ ಬಗ್ಗೆ ಬರೆದುಕೊಂಡಿದ್ದಾರೆ. ಒಬ್ಬ ಪತಿಗೆ ಇದಕ್ಕಿಂತ ದೊಡ್ಡದು ಇನ್ನೇನು ಬೇಕು?

ಕೆಜಿಎಫ್ ಗೆ ಶುಭ ಹಾರೈಸಿದ ಸ್ಯಾಂಡಲ್ ವುಡ್ ತಾರೆಯರು
ಇನ್ನು ರಾಧಿಕಾ ಪಂಡಿತ್ ಮಾತ್ರವಲ್ಲ, ಕೆಜಿಎಫ್ ಸಿನಿಮಾ ಯಶಸ್ವಿಯಾಗಲೆಂದು ಯಶ್‍ ಆತ್ಮೀಯರು, ಚಿತ್ರ ತಾರೆಯರೂ ಶುಭ ಹಾರೈಸಿದ್ದಾರೆ. ನವರಸನಾಯಕ ಜಗ್ಗೇಶ್, ರಿಯಲ್ ಸ್ಟಾರ್ ಉಪೇಂದ್ರ, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Madenur Manu: ಕಾಮಿಡಿ ಕಿಲಾಡಿಗಳು ನಟ ಮಡೆನೂರು ಮನು ವಿರುದ್ಧ ರೇಪ್ ಕೇಸ್

Jayam Ravi: ವಿಚ್ಛೇದನ ವೇಳೆ ಜಯಂ ರವಿ ಪತ್ನಿ ಬೇಡಿಕೆಯಿಟ್ಟಿರುವ ಹಣದ ಮೊತ್ತ ಶಾಕ್ ಆಗುವಂತಿದೆ

ಒಂದು ಬ್ಯಾಡ್ ನ್ಯೂಸ್ ಜೊತೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟ ವೈಷ್ಣವಿ ಗೌಡ

Yash mother: ಸೊಸೆ ರಾಧಿಕಾ ಪಂಡಿತ್ ನನ್ನ ಮಗನಿಗಿಂತಲೂ ಕಿಲಾಡಿ ಎಂದ ಯಶ್ ತಾಯಿ ಪುಷ್ಪ

ಬಹುಭಾಷಾ ತಾರೆ ರಾಶಿ ಖನ್ನಾ ಮೂಗಿನಲ್ಲಿ ರಕ್ತ ಕಂಡು ಗಾಬರಿಯಾದ ಫ್ಯಾನ್ಸ್‌: ಶೂಟಿಂಗ್‌ ವೇಳೆ ಏನಾಯಿತು

ಮುಂದಿನ ಸುದ್ದಿ
Show comments