ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಬರ್ತ್ ಡೇ ದಿನವೇ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಾವು ಈ ವರ್ಷವೂ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದಿದ್ದಾರೆ.
ರಾಧಿಕಾ ಪಂಡಿತ್ ಕಳೆದ ವರ್ಷವೂ ಬರ್ತ್ ಡೇ ಆಚರಿಸಿಕೊಂಡಿರಲಿಲ್ಲ. ಈ ವರ್ಷವೂ ಪುಟಾಣಿ ಮಕ್ಕಳಿರುವುದರಿಂದ ಈ ವರ್ಷವೂ ಆಚರಣೆ ಕಷ್ಟ. ಅದಕ್ಕೆ ಕ್ಷಮೆಯಿರಲಿ ಎಂದು ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.
ನನ್ನನ್ನು ನೋಡಲು ದೂರದ ಊರಿನಿಂದ ಬರುತ್ತೀರಾ. ಅವರಿಗೆಲ್ಲಾ ತೊಂದರೆಯಾಗದಿರಲಿ ಎಂದು ಮೊದಲೇ ಹೇಳುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ನೀವು ಕಳುಹಿಸುವ ವಿಶ್ ಗಳಿಗೆ ಉತ್ತರಿಸುತ್ತೇನೆ. ಮುಂದಿನ ವರ್ಷ ಖಂಡಿತಾ ನಿಮ್ಮೆಲ್ಲರ ಜತೆ ಹುಟ್ಟುಹಬ್ಬ ಆಚರಿಸುವೆ ಎಂದು ರಾಧಿಕಾ ವಿಡಿಯೋದಲ್ಲಿ ಹೇಳಿದ್ದಾರೆ.