Select Your Language

Notifications

webdunia
webdunia
webdunia
webdunia

ಮತ್ತೆ ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್!

ಮತ್ತೆ ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್!
ಬೆಂಗಳೂರು , ಬುಧವಾರ, 18 ಮಾರ್ಚ್ 2020 (09:18 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ಎರಡನೇ ಮಗುವಿಗೆ ತಂದೆ-ತಾಯಿಯಾಗಿ ಆರು ತಿಂಗಳಾಗುತ್ತಾ ಬಂದಿದೆ. ಇದೀಗ ರಾಧಿಕಾ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನು ಅಂತೀರಾ? ಈ ಸುದ್ದಿ ಓದಿ.


ರಾಧಿಕಾ ಮಗಳು ಐರಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿಬಿಟ್ಟಿದ್ದಾಳೆ. ಐರಾ ಕುಂತರೂ ಚಂದ ನಿಂತರೂ ಚಂದ ಎಂದಾಗಿದೆ. ಈ ನಡುವೆ ಅಭಿಮಾನಿಗಳು ಜ್ಯೂನಿಯರ್ ರಾಕಿ ಬಾಯ್ ಯಾವಾಗ ತೋರಿಸುತ್ತೀರಿ ಎಂದು ರಾಧಿಕಾರನ್ನು ಕೇಳುತ್ತಲೇ ಇದ್ದಾರೆ.

ಇದುವರೆಗೆ ಯಶ್ ದಂಪತಿ ತಮ್ಮ ಪುತ್ರನ ಫೋಟೋವನ್ನು ಹೊರಗೆ ಎಲ್ಲೂ ಪ್ರಕಟಿಸಿಲ್ಲ. ಹೀಗಾಗಿ ಅಭಿಮಾನಿಗಳಿಗೂ ಜ್ಯೂನಿಯರ್ ಯಶ್ ಹೇಗಿರಬಹುದು ಎಂಬ ಕುತೂಹಲವಿದೆ. ಹೀಗಾಗಿ ರಾಧಿಕಾ, ಯಶ್ ಬಳಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಪುತ್ರನ ಫೋಟೋ ಯಾವಾಗ ತೋರಿಸುತ್ತೀರಿ ಎಂದು ಕೇಳುತ್ತಲೇ ಇರುತ್ತಾರೆ. ಇದಕ್ಕೀಗ ರಾಧಿಕಾ ಉತ್ತರಿಸಿದ್ದು, ಸದ್ಯದಲ್ಲೇ ನಮ್ಮ ಜ್ಯೂನಿಯರ್ ಫೋಟೋ ನಿಮ್ಮ ಮುಂದೆ ಪ್ರಕಟಿಸುತ್ತೇವೆ ಎಂದಿದ್ದಾರೆ. ರಾಧಿಕಾ ಮಾತಿನಿಂದ ಅಭಿಮಾನಿಗಳೂ ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಸಿನಿಕ್ಷೇತ್ರದಲ್ಲೇ ಮೊದಲ ಬಾರಿಗೆ 2 ಭಾಗಗಳ ಚಿತ್ರೀಕರಣ ಕಂಪ್ಲೀಟ್..!