Select Your Language

Notifications

webdunia
webdunia
webdunia
webdunia

ಮಗಳು ಹುಟ್ಟಿದ ಬಳಿಕ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್!

ಮಗಳು ಹುಟ್ಟಿದ ಬಳಿಕ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್!
ಬೆಂಗಳೂರು , ಸೋಮವಾರ, 1 ಏಪ್ರಿಲ್ 2019 (09:05 IST)
ಬೆಂಗಳೂರು: ನಟಿ ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿದ್ದು ಒಂದೇ ಸಿನಿಮಾ. ಅದೂ ಇನ್ನೂ ಬಿಡುಗಡೆಯಾಗಿಲ್ಲ. ಹಾಗಿದ್ದರೂ ಪತಿ ಯಶ್ ಜತೆಗೆ ರಾಧಿಕಾರನ್ನು ಇನ್ನು ತೆರೆ ಮೇಲೆ ನೋಡಬೇಕು ಎನ್ನುವ ಅಭಿಮಾನಿಗಳ ಹಂಬಲ ಕಡಿಮೆಯಾಗಿಲ್ಲ.


ಮಗಳು ಹುಟ್ಟಿದ ಮೇಲೆ ಸಂಪೂರ್ಣವಾಗಿ ಕೆಲವು ಕಾಲ ಚಿತ್ರರಂಗದಿಂದ ದೂರವಿರುವ ರಾಧಿಕಾ ಇದೀಗ ನಿನ್ನೆ ನಡೆದ ಕೆಜಿಎಫ್ ಶತದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಮಾಧ್ಯಮಗಳಿಗೆ ಎದುರಾಗಿದ್ದಾರೆ.

ಈ ಸಂದರ್ಭದಲ್ಲಿ ಅವರಿಗೆ ಮತ್ತೆ ಯಶ್ ಜತೆಗೆ ನಟಿಸ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ‘ಖಂಡಿತಾ. ಅಂತಹದ್ದೊಂದು ಸ್ಕ್ರಿಪ್ಟ್ ಬಂದು ಅದಕ್ಕೆ ನಮ್ಮ ಅಗತ್ಯವಿದೆ ಎನಿಸಿದರೆ ನಟಿಸ್ತೀವಿ. ಇದುವರೆಗೆ ಹಲವು ಅಂತಹ ಆಫರ್ ಗಳು ಬಂದಿವೆ. ಆದರೆ ಕತೆ ಒಪ್ಪಿಗೆಯಾಗದೇ ಬೇಡ ಅಂತ ಬಿಟ್ಟಿದ್ದೀವಿ’ ಎಂದು ರಾಧಿಕಾ ಹೇಳಿದ್ದಾರೆ. ಆ ಮೂಲಕ ಮುಂದೊಂದು ದಿನ ಮತ್ತೆ ಯಶ್ ಜತೆಗೆ  ತೆರೆ ಹಂಚಿಕೊಳ್ಳುವುದಾಗಿ ರಾಧಿಕಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದಿದ್ದಕ್ಕೆ ಹಾಸ್ಯನಟ ಚಿಕ್ಕಣ್ಣ ಆಂಕರ್ ಅನುಶ್ರೀಗೆ ಹೇಳಿದ್ದೇನು ಗೊತ್ತಾ?