Webdunia - Bharat's app for daily news and videos

Install App

ವೆಡ್ಡಿಂಗ್ ಡೇ ದಿನ ರಾಧಿಕಾ ಪಂಡಿತ್ ಪ್ರಕಟಿಸಿದ ಫೋಟೋ ಬಯಲು ಮಾಡಿತು ಒಂದು ಸೀಕ್ರೆಟ್!

Webdunia
ಸೋಮವಾರ, 9 ಡಿಸೆಂಬರ್ 2019 (09:55 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಎಲ್ಲರೂ ಇಷ್ಟಪಡುವ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಗೆ ಇಂದು ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಈ ಖುಷಿಯಲ್ಲಿ ರಾಧಿಕಾ ಹಳೆಯ ಫೋಟೋ ಒಂದನ್ನು ಪ್ರಕಟಿಸಿದ್ದಾರೆ.


ಜತೆಗೆ ಯಶ್ ಮತ್ತು ತಮ್ಮ ಸಂಬಂಧದ ಬಗ್ಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ಪ್ರಕಟಿಸಿದ ಫೋಟೋ ಒಂದು ಅವರಿಬ್ಬರ ಲವ್ ಲೈಫ್ ಎಷ್ಟು ಹಳೆಯದು ಎಂಬ ರಹಸ್ಯ ಹೊರಹಾಕಿದೆ.

ಈ ಫೋಟೋ ಯಶ್ ‘ಲಕ್ಕಿ’ ಸಿನಿಮಾ ಮಾಡುವ ಸಂದರ್ಭದಲ್ಲಿ ತೆಗೆದಿದ್ದು ಎಂದು ಅವರ ಹೇರ್ ಸ್ಟೈಲ್ ನೋಡಿದರೆ ಗೊತ್ತಾಗುತ್ತದೆ. ಮೊಗ್ಗಿನ ಮನಸ್ಸು ಸಿನಿಮಾದಿಂದಲೂ ರಾಧಿಕಾ ಮತ್ತು ಯಶ್ ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಯಾಗಿ ಚಿಗುರೊಡೆದಿತ್ತು. ಆದರೆ ಇವರಿಬ್ಬರೂ ಎಲ್ಲೂ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿರಲಿಲ್ಲ. ಇದ್ದಕ್ಕಿದ್ದ ಹಾಗೆ ಎಂಗೇಜ್ ಮೆಂಟ್ ಮಾಡಿಕೊಳ್ಳುವ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿ ಶಾಕ್ ಕೊಟ್ಟಿತ್ತು ಈ ಜೋಡಿ.

ರಾಧಿಕಾ ಮತ್ತು ಯಶ್ ಜತೆಯಾಗಿ ನಿಂತಿರುವ ಈ ಹಳೆಯ ಚೆಂದದ ಫೋಟೋವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಜತೆಗೆ ಈ ರಾಮಾಚಾರಿ ಜೋಡಿಯ ಜೀವನ ಹೀಗೇ ಇರಲಿ ಎಂದು ಹಾರೈಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ದರ್ಶನ್ ಆಂಡ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

Renukaswamy Case: ಎರಡನೇ ಭಾರೀ ಜೈಲು ಸೇರಿದ ದರ್ಶನ್‌

ಏನೂ ಆಗಲ್ಲ ಬಾಸ್, ನಿಮ್ಮೊಂದಿಗೆ ನಾವಿದ್ದೇವೆ: ಡಿಬಾಸ್ ಗೆ ಫ್ಯಾನ್ಸ್ ಫುಲ್ ಸಪೋರ್ಟ್

ಫೇವರೇಟ್‌ ಕಲರ್‌ನ ಬಟ್ಟೆ, ಲಿಪ್‌ಸ್ಟಿಕ್‌, ಕ್ಲಿಪ್‌ ಹಾಕಿ ಗ್ಲಾಮರ್‌ ಲುಕ್‌ನಲ್ಲೇ ಹೊರಟ ಪವಿತ್ರಾ

ಜೀಪ್ ನಲ್ಲೂ ಬರಲಿಲ್ಲ, ಪತ್ನಿ ಬಳಿಯೂ ಬರಲಿಲ್ಲ, ದರ್ಶನ್ ಪ್ಲ್ಯಾನ್ ಏನು

ಮುಂದಿನ ಸುದ್ದಿ
Show comments