Select Your Language

Notifications

webdunia
webdunia
webdunia
webdunia

ಕಾಂಡೋಮ್‌ ಜಾಹೀರಾತಿನಲ್ಲಿ ರಾಧಿಕಾ ಆಮ್ಟೆ: ಲೈಂಗಿಕ ಶಿಕ್ಷಣದ ಬಗ್ಗೆ ಹಾಟ್‌ಬ್ಯೂಟಿಯ ಕ್ಲಾಸ್‌

Radhika Amte

sampriya

ಮುಂಬೈ , ಶನಿವಾರ, 25 ಮೇ 2024 (14:26 IST)
Photo By Instagram
ಮುಂಬೈ: ಬಾಲಿವುಡ್‌ನ ಹಾಟ್‌ ಬ್ಯೂಟಿ ರಾಧಿಕಾ ಆಪ್ಟೆ ಅವರು ಕಾಂಡೋಮ್ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಜಾಹೀರಾತಿನ ಜೊತೆಯಲ್ಲಿ ಮಹಿಳೆಯರಿಗೆ ಲೈಂಗಿಕ ಶಿಕ್ಷಣದ ಕುರಿತು ಕೆಲ ಮಾಹಿತಿಯನ್ನು ರಾಧಿಕಾ ಆಪ್ಟೆ ನೀಡಿದ್ದಾರೆ. ರಾಧಿಕಾ ಆಪ್ಟೆ ಈ ಜಾಹೀರಾತಿ ಮೂಲಕ ಹಲವು ಪ್ರಶ್ನೆ ಎತ್ತಿದ್ದಾರೆ. ವಿಶೇಷವಾಗಿ ಮಹಿಳೆಯರಿಗೆ ಸಲಹೆಯನ್ನು ನೀಡಿದ್ದಾರೆ.

ಕಾಂಡೋಮ್ ಎಂಬ ಪದ ಕೇಳಿದ್ರೆ ಈಗಲೂ ಜನರು ಯಾಕೆ ಮುಜುಗರಕ್ಕೆ ಒಳಗಾಗುತ್ತಾರೆ? ಮಹಿಳೆಯರು ಕಾಂಡೋಮ್ ಖರೀದಿಯ ನಿರ್ಧಾರವನ್ನು ತಮ್ಮ ಸಂಗಾತಿಯ ವಿವೇಚನೆಗೆ ಬಿಡುತ್ತಿರೋದು ಯಾಕೆ? ಈ ವಿಷಯದಲ್ಲಿ ನಮ್ಮ ಅಭಿಪ್ರಾಯವೂ ಮುಖ್ಯವಾಗಿರುತ್ತೆ ಎಂದು ಯಾರಿಗೂ ಯಾಕೆ ಅನ್ನಿಸಲ್ಲ ಎಂದು ರಾಧಿಕಾ ಆಪ್ಟೆ ಪ್ರಶ್ನೆ ಮಾಡಿದ್ದಾರೆ.

ಕಾಂಡೋಮ್ ಖರೀದಿಯಲ್ಲಿಯೂ ನಮ್ಮ ನಿರ್ಧಾರ ಮುಖ್ಯವಾಗಿರುತ್ತದೆ. ಈ ವಿಷಯದಲ್ಲಿ ಮಹಿಳೆಯರೇ ನೀವು ಬೇರೆಯವರ ನಿರ್ಧಾರದ ಮೇಲೆ ನೀವು ಅವಲಂಬಿತರಾಗಬೇಡಿ. ನೀವೇ ಹೋಗಿ ನಿಮ್ಮಿಷ್ಟದ ಕಾಂಡೋಮ್ ಖರೀದಿಸಬೇಕು ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

 ಹಿಂದಿ , ತಮಿಳು , ತೆಲುಗು ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ರಾಧಿಕಾ, ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿ ನಾಮನಿರ್ದೇಶನ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ 2016 ರಲ್ಲಿ ಬಿಡುಗಡೆಯಾದ ಫೋಬಿಯಾ ಮತ್ತು ಪಾರ್ಚೆಡ್‌ನಲ್ಲಿ ಅವರ ಪ್ರಮುಖ ಪಾತ್ರಗಳು ಜನಮೆಚ್ಚುಗೆ ಗಳಿಸಿದವು. ಅವರು ಲಂಡನ್ ಮೂಲದ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅವರನ್ನು 2012 ರಲ್ಲಿ ವಿವಾಹವಾಗಿದ್ದಾರೆ .

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಮೇಶ್ ಅರವಿಂದ್ ಗೆ ಸಿಕ್ತು ಪೆನ್ ಡ್ರೈವ್, ಬೆಚ್ಚಿಬಿದ್ದ ನಟ