Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಲೀಕ್

Max Movie

Krishnaveni K

ಬೆಂಗಳೂರು , ಶನಿವಾರ, 25 ಮೇ 2024 (09:04 IST)
Photo Courtesy: Twitter
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯವೊಂದು ಈಗ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ. ಈ ದೃಶ್ಯ ಆನ್ ಲೈನ್ ನಲ್ಲಿ ಲೀಕ್ ಆಗುತ್ತಿದ್ದಂತೇ ನಾನಾ ವಿಧದ ಕಾಮೆಂಟ್ ಗಳು ಬಂದಿವೆ.

ಮ್ಯಾಕ್ಸ್ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಚೆನ್ನೈನಲ್ಲಿ ವಿಶೇಷ ಸೆಟ್ ಹಾಕಿ ಚಿತ್ರೀಕರಿಸಲಾಗಿತ್ತು. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಹಿಂದೆಂದೂ ಕಾಣದಂತಹ ಅದ್ಭುತ ಸಾಹಸ ಸನ್ನಿವೇಶಗಳಿವೆ ಎನ್ನಲಾಗಿತ್ತು. ಇತ್ತೀಚೆಗಷ್ಟೇ ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು.

ಆದರೆ ಇದೀಗ ಕ್ಲೈಮ್ಯಾಕ್ಸ್ ಸನ್ನಿವೇಶದ ಭೀಭತ್ಸ ದೃಶ್ಯವೊಂದು ಆನ್ ಲೈನ್ ನಲ್ಲಿ ಹರಿದಾಡುತ್ತಿದ್ದಾರೆ. ಸುತ್ತಲೂ ತಮಟೆ, ಡೋಲು ಬಡಿಯುವವರು, ತ್ರಿಶೂಲ ಹಿಡಿದವರೂ ಇದ್ದಾರೆ. ಕಿಚ್ಚ ಸುದೀಪ್ ಮಾಸ್ ಅವತಾರದಲ್ಲಿ ಎಂಟ್ರಿ ಕೊಡುವ ಫೋಟೋವೊಂದು ಹರಿದಾಡಿದೆ.

ಈ ಫೋಟೋ ನೋಡಿ ಅಭಿಮಾನಿಗಳು ಇದನ್ನು ನೋಡುತ್ತಿದ್ದರೇ ಕ್ಲೈಮ್ಯಾಕ್ಸ್ ಹೇಗಿರಬಹುದು ಎಂದು ಕಲ್ಪನೆ ಮಾಡಿಕೊಳ್ಳಬಹುದು. ಈ ಸನ್ನಿವೇಶವನ್ನು ಥಿಯೇಟರ್ ನಲ್ಲಿ ನೋಡಲು ಕಾಯುತ್ತಿದ್ದೇವೆ. ಇದಕ್ಕೆ ಅಜನೀಶ್ ಹಿನ್ನಲೆ ಸಂಗೀತವೂ ಸೇರಿದರೆ ಅತ್ಯುತ್ತಮ ದೃಶ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಟಿನ್ ಸಿನಿಮಾ ಬಿಡುಗಡೆ ದಿನಾಂಕದ ಪ್ರಕಟಣೆ ಜೊತೆಗೆ ಪ್ರತಿಜ್ಞೆ ಮಾಡಿದ ಧ್ರು ವ ಸರ್ಜಾ