Webdunia - Bharat's app for daily news and videos

Install App

ದೇವರೇ ಬಂದು ಹೇಳಿದ್ರೂ ಕ್ಷಮೆ ಕೇಳಲ್ಲ ಎಂದ ರಚಿತಾ ರಾಮ್: ನಾವಿದ್ದೀವಿ ಎಂದ ಡಿ ಬಾಸ್ ಫ್ಯಾನ್ಸ್

Krishnaveni K
ಶನಿವಾರ, 21 ಜೂನ್ 2025 (09:31 IST)
Photo Credit: Instagram
ಬೆಂಗಳೂರು: ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಮೋಷನ್ ಗೆ ಬಂದಿಲ್ಲ ಎಂದು ಚಿತ್ರತಂಡ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ದೇವರೇ ಬಂದು ಹೇಳಿದ್ರೂ ಕ್ಷಮೆ ಕೇಳಲ್ಲ ಎಂದಿದ್ದಾರೆ. ಇದಕ್ಕೆ ಡಿಬಾಸ್ ಫ್ಯಾನ್ಸ್ ಕೂಡಾ ಬೆಂಬಲಿಸಿದ್ದು, ನಾವಿದ್ದೀವಿ ನಿಮ್ಮ ಜೊತೆಗೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ನಿನ್ನೆ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಪ್ರಕಟಿಸಿದ ರಚಿತಾ ರಾಮ್ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಪ್ರಮೋಷನ್ ಗೆ ಬಂದಿಲ್ಲ ಎಂದು ನಿರ್ದೇಶಕ ನಾಗಶೇಖರ್, ಕಿಟ್ಟಿ ಮಾಡಿರುವ ಆರೋಪಗಳಿಗೆ ಉತ್ತರಿಸಿರುವ ಅವರು ‘ಸಂಜು ವೆಡ್ಸ್ ಗೀತಾ ಸಿನಿಮಾಗಾಗಿ ನಾನು ಒಂದೂವರೆ ವರ್ಷ ಕೊಟ್ಟಿದ್ದೇನೆ. ಈ ಸಿನಿಮಾ ಚಿತ್ರೀಕರಣ ವೇಳೆ ನಾನು ಮಹಿಳಾ ನಿರ್ಮಾಪಕರೊಬ್ಬರ ಸಿನಿಮಾ ಪ್ರಮೋಷನ್ ಗೆ ಹೋಗಬೇಕಿತ್ತು. ಅವರು ಒಂದು ದಿನ ಬನ್ನಿ ಎಂದು ರಿಕ್ವೆಸ್ಟ್ ಮಾಡಿದ್ರು. ಆದರೆ ಇದೇ ಸಂಜು ವೆಡ್ಸ್ ಗೀತಾ ಟೀಂ ಆಗ ನನ್ನನ್ನು ಬಿಟ್ಟಿರಲಿಲ್ಲ. ಅವರದ್ದು ಸಿನಿಮಾ ಅಲ್ವಾ?

ಈಗ ನಿಮ್ಮ ಸಿನಿಮಾ ಮೊದಲನೇ ಬಾರಿಗೆ ರಿಲೀಸ್ ಆದಾಗ ನಾನು ಎಲ್ಲಾ ಪ್ರೆಸ್ ಮೀಟ್, ಒನ್ ಟು ಒನ್ ಇಂಟರಾಕ್ಷನ್ ಗೆ ಬಂದಿದ್ದೆ. ಆಗೆಲ್ಲಾ ನನ್ನನ್ನು, ನನ್ನ ಕೆಲಸ, ಬದ್ಧತೆಯನ್ನು ಹಾಡಿ ಹೊಗಳಿದ್ರು. ನನ್ನ ಜೊತೆ ಸಮಸ್ಯೆಯಿದ್ದಿದ್ದರೆ ಆಗಲೇ ಹೇಳಬಹುದಿತ್ತಲ್ವಾ? ಯಾಕೆ ಹೇಳಲಿಲ್ಲ. ಆಗ ಹೊಗಳಿ ಈಗ ಆರೋಪ ಮಾಡುತ್ತಿರುವುದು ಯಾಕೆ?

ಈಗಲೂ ನಾನು ಒಂದು ಸಿನಿಮಾ ಶೂಟಿಂಗ್ ನಲ್ಲಿದ್ದೇನೆ. ಆ ಸಿನಿಮಾ ತಂಡ ಈಗಾಗಲೇ ಲೊಕೇಷನ್ ಪ್ಲ್ಯಾನ್ ಮಾಡಿಕೊಂಡಿದೆ. ಅವರು ಈಗ ಶೂಟಿಂಗ್ ಒಂದು ದಿನ ನಿಲ್ಲಿಸಲು ಸಾಧ್ಯವಿಲ್ಲ ಅಂತಿದ್ದಾರೆ. ಹೀಗಾಗಿ ನಾನು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಕಾರಣಕ್ಕೆ ನೇರವಾಗಿ ಪ್ರಚಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್, ಫೋಟೋ ಮೂಲಕ ರಿ ರಿಲೀಸ್ ಬಗ್ಗೆ ನಾನು ಪ್ರಮೋಷನ್ ಮಾಡುತ್ತಲೇ ಇದ್ದೇನೆ. ಒಂದು ವೇಳೆ ನಾನು ಕ್ಷಮೆ ಕೇಳಬೇಕಿದ್ದರೆ ಅದು ನನ್ನನ್ನು ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಮಾತ್ರ. ಸಂಜು ವೆಡ್ಸ್ ಗೀತಾ ಟೀಂಗೆ ಅಲ್ಲ. ತಪ್ಪು ಮಾಡಿದ್ರೆ ನಾನು ನನ್ನಿಂದ ಚಿಕ್ಕವರಾಗಿದ್ದರೂ ಕಾಲಿಗೆ ಬೀಳಲು ರೆಡಿ. ತಪ್ಪು ಮಾಡಿಲ್ಲ ಅಂದರೆ ದೇವರೇ ಬಂದು ಹೇಳಿದ್ರೂ ಕ್ಷಮೆ ಕೇಳಲ್ಲ’ ಎಂದು ರಚಿತಾ ಹೇಳಿದ್ದಾರೆ.

ರಚಿತಾ ರಾಮ್ ವಿಡಿಯೋಗೆ ಕಾಮೆಂಟ್ ಮಾಡಿರುವ ಡಿಬಾಸ್ ಅಭಿಮಾನಿಗಳು ನಾವು ನಿಮ್ಮ ಜೊತೆಗಿದ್ದೇವೆ. ನೀವು ಏನು ಅಂತ ನಮಗೆ ಗೊತ್ತು. ನೀವು ಯಾರಿಗೂ ಕ್ಷಮೆ ಕೇಳಬೇಕಾಗಿಲ್ಲ ಎಂದು ಬೆಂಬಲಿಸಿ ಮಾತನಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಮುಂದಿನ ಸುದ್ದಿ
Show comments