Webdunia - Bharat's app for daily news and videos

Install App

ಟೀಕೆಯ ಬೆನ್ನಲ್ಲೆ ಅಲ್ಲು ಅರ್ಜುನ್‌ ಹಾಡಿರುವ ಪುಷ್ಪ 2 ಸಿನಿಮಾದ ದಮ್ಮುಂಟೆ ಪಟ್ಟುಕೊರಾ ಹಾಡಿಗೆ ಕತ್ತರಿ

Sampriya
ಶುಕ್ರವಾರ, 27 ಡಿಸೆಂಬರ್ 2024 (10:52 IST)
Photo Courtesy X
ಹೈದರಾಬಾದ್‌: ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಸಿನಿಮಾದ ದಮ್ಮಿದ್ರೆ ನನ್ನನ್ನು ಹಿಡಿಯಿರಿ ಹಾಡು ಟೀಕೆಗೆ ಗುರಿಯಾದ ಬೆನ್ನಲ್ಲೇ  ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಯೂಟ್ಯೂಬ್‌ನಿಂದ ಆ ಹಾಡನ್ನು ತೆಗೆದುಹಾಕಿದೆ.

ಅಲ್ಲು ಅರ್ಜುನ್‌ ಹಾಡಿರುವ ದಮ್ಮುಂಟೆ ಪಟ್ಟುಕೊರಾ ಹಾಡು ಡಿಸೆಂಬರ್ 24 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣೆದಾರರ ಸಿಂಡಿಕೇಟ್​ನ ಮುಖಂಡ. ಚಿತ್ರದಲ್ಲಿ ಅಲ್ಲು ಅರ್ಜುನ್ ಅನ್ನು ಹಿಡಿಯಲು ಪೊಲೀಸ್ (ಶೇಖಾವತ್) ಒಬ್ಬ ಬಹಳ ಪ್ರಯತ್ನ ಪಡುತ್ತಿರುತ್ತಾನೆ.  

ದೃಶ್ಯವೊಂದರಲ್ಲಿ ಶೆಖಾವತ್​ಗೆ ಸವಾಲು ಹಾಕುವ ಪುಷ್ಪ  ದಮ್ಮಿದ್ರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸ್‌ ಅಧಿಕಾರಿ ಶೇಖಾವತ್‌ಗೆ ಎಂದು ಹಾಡು ಹೇಳುತ್ತಾ ಸವಾಲು ಹಾಕುತ್ತಾನೆ. ಈ ಸಾಲು ಟೀಕೆಗೆ ಗುರಿಯಾಗಿತ್ತು. ಪೊಲೀಸರನ್ನು ಗೇಲಿ ಮಾಡಲಾಗಿದೆ ಎಂದೂ ಹೇಳಲಾಗಿತ್ತು.

ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಬಂಧನ ಹಾಗೂ ನಂತರದ ಬೆಳವಣಿಗೆಗಳ ನಡುವೆ ಚಿತ್ರ ತಂಡ ಈ ಹಾಡಿಗೆ ಕತ್ತರಿ ಹಾಕಿದೆ.

ಇನ್ನು ವಿವಾದಗಳ ನಡುವೆಯೇ ಪುಷ್ಪ 2 ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 21 ದಿನಗಳನ್ನು ಪೂರೈಸಿದೆ.  ₹ 1600 ಕೋಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಜತೆಗಿನ ಮುನಿಸಿನ ಬಗ್ಗೆ ಓಪನ್ ಆಗಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್‌

ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಕೊಟ್ರು ಖಡಕ್ ರಿಪ್ಲೈ

ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಮುಂದಿನ ಸುದ್ದಿ
Show comments